ವಿರಾಜಪೇಟೆ; ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ ದೇವರ ನೃತ್ಯಬಲಿ

Feb 17, 2026 - 11:07
 0  290
ವಿರಾಜಪೇಟೆ; ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ  ದೇವರ ನೃತ್ಯಬಲಿ

ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ, ಶ್ರದ್ದಾಭಕ್ತಿಯಿಂದ ನಡೆಯಿತು. ಹಬ್ಬದ ಸಲುವಾಗಿ ಹಾಗೂ ದೇವಾಲಯದಲ್ಲಿ ಧಾರಾ ಮಹೇಶ್ವರನಿಗೆ ರುದ್ರಾಭಿಶೇಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಪುನಸ್ಕಾರಗಳು, ದೇವರ ಜಳಕ, ನೃತ್ಯಬಲಿ ಪ್ರದರ್ಶನ ನಡೆಯಿತು.

 ಇದೇ ಸಂದರ್ಭ ಎತ್ತ್ ಪೋರಾಟ್ ನಡೆಯಿತು. ದೇವತಕ್ಕರಾಗಿ ಕೋದಂಡ ಕುಟುಂಬ ಹಾಗೂ ಭಂಢಾರ ತಕ್ಕರಾಗಿ ಚಂಗಚಂಡ ಕುಟುಂಬ ಕಾರ್ಯನಿರ್ವಹಿಸಿದರು. ಶಿವರಾತ್ರಿ ಉತ್ಸವದ ಸಲುವಾಗಿ ಕದನೂರು ಕೊಟ್ಟೋಳಿ ಕೊಡವ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಅನ್ನ ಸಂತರ್ಪಣೆಗೆ ಸಹಾಯಹಸ್ತ ನೀಡಿದರು. ಜೈ ಭಾರತ್ ಆಟೋ ಚಾಲಕರ ಸಂಘದ ವತಿಯಿಂದ ನೆರೆದ ಭಕ್ತಾಧಿಗಳಿಗಳಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು.

 ಜೈ ಭಾರತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವು, ಗೌರವಾಧ್ಯಕ್ಷರಾದ ಪ್ರವೀಣ್ ಶೇಟ್ ಮಜ್ಜಿಗೆ ವಿತರಣೆ ಕಾರ್ಯ ನಿರ್ವಹಿಸಿದರು. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

 ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚಂಡ ಚೇತನ್ ಬೆಳ್ಯಪ್ಪ, ಸಹ ಕಾರ್ಯದರ್ಶೀ ವಿಶ್ವನಾಥ್ ಬಬ್ಬಿ, ದೀಪಾ ವಿಶ್ವನಾಥ್, ಅಧ್ಯಕ್ಷ ಕೋದಂಡ ಅಜಯ್ ಹಾಗೂ ಕುಟುಂಬಸ್ಥರು ಹಾಗೂ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0