Kodagu

ವಿರಾಜಪೇಟೆ:ಚಾಲಕನ ನಿಯಂತ್ರಣ ತಪ್ಪಿ ಕಾರು, ಅಂಗಡಿ ಕಾಂಪೌಂಡ್‌ಗೆ ಡಿಕ್ಕಿ

admincoorgdaily

ವಿರಾಜಪೇಟೆ:ಚಾಲಕನ ನಿಯಂತ್ರಣ ತಪ್ಪಿ ಕಾರು, ಅಂಗಡಿ ಕಾಂಪೌಂಡ್‌ಗೆ ಡಿಕ್ಕಿ

ವಿರಾಜಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಡ್ಡದಿಡ್ಡಿ ಮುನ್ನುಗ್ಗಿ ಕೃಷಿ ಯಂತ್ರೋಪಕರಣ ಮಾರಾಟ ಮಳಿಗೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು, ಕಲ್ಯಾಣಿ ಮೋಟಾರ್ಸ್‌ನ ಬೋರ್ಡ್‌ಗೆ ಹಾನಿ ಉಂಟುಮಾಡಿರುವ ಘಟನೆ ವಿರಾಜಪೇಟೆ ನಗರದ ಪಂಜರಪೇಟೆ ಬಳಿ ನಡೆದಿದೆ.

 ಸ್ಥಳೀಯರ ಪ್ರಕಾರ, ಅಪಘಾತದ ವೇಗದಿಂದ ಕಾರು ಕಾಂಪೌಂಡ್ ಗೋಡೆ ಹಾಗೂ ಬೋರ್ಡ್‌ನ್ನು ಧ್ವಂಸಗೊಳಿಸಿದೆ. ಕಾರು ಚಾಲಕ ಖಾಸಗಿ ರೆಸಾರ್ಟ್‌ನ ಉದ್ಯೋಗಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗಾಗಿ ಕೇರಳದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಈ ವೇಳೆ ಅಂಗಡಿಯ ಬಳಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.