Kodagu

ವಿರಾಜಪೇಟೆ:ಫೆಡರೇಷನ್ ಸಂಸ್ಥೆಯಿಂದ ಕಟ್ಟಡ ಸಾಮಾಗ್ರಿಗಳ ಮಳಿಗೆ ಲೋಕಾರ್ಪಣೆ

admincoorgdaily

ವಿರಾಜಪೇಟೆ:ಫೆಡರೇಷನ್ ಸಂಸ್ಥೆಯಿಂದ ಕಟ್ಟಡ ಸಾಮಾಗ್ರಿಗಳ ಮಳಿಗೆ ಲೋಕಾರ್ಪಣೆ

ವಿರಾಜಪೇಟೆ:ಜು:13: ಸಹಕಾರ ವಲಯದಲ್ಲಿ ತನ್ನದೆಯಾದ ರೀತಿಯಲ್ಲಿ ಛಾಪುಮೂಡಿಸಿರುವ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್) ಸಂಸ್ಥೆಯು ತನ್ನ ಗ್ರಾಹಕರಿಗೆ ಉತೃಷ್ಟ ಬೆಲೆಯಲ್ಲಿ ಕಟ್ಟಡ ಸಾಮಾಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕಟ್ಟಡ ಸಾಮಾಗ್ರಿಗಳ ಮಳಿಗೆಯನು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿತು.

ನಂ.378ನೇ ಕೋಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೇಡರೇಶನ್) ವಿರಾಜಪೇಟೆ ಸಂಸ್ಥೆಯು ಮುಖ್ಯ ರಸ್ತೆ ಆರ್ಜಿಯಲ್ಲಿ ಬಹು ಉಪಯೋಗಿ ಕಟ್ಟಡ ಸಾಮಾಗ್ರಿಗಳ ನೂತನ ಮಳಿಗೆಯನ್ನು ಲೋಕಾರ್ಪಣೆ ಮಾಡಿತು. 

ರಿಬ್ಬನ್ ಕತ್ತರಿಸುವ ಮೂಲಕ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ವಾಟೇರಿರ ಬೋಪಣ್ಣ ಅವರು, ಸಹಕಾರ ಕ್ಷೇತ್ರದಲ್ಲಿ ಫೇಡರೇಶನ್ ಸಂಸ್ಥೆಯು ತನ್ನ 75 ವರ್ಷಗಳನು ಪೂರೈಸಿದೆ. ಕೊಡಗು ಜಿಲ್ಲಾದ್ಯಾಂತ ಸುಮಾರು 8000 ಮಂದಿ ಸದಸ್ಯರನು ಹೊಂದಿದೆ. ಸಂಸ್ಥೆಯು ಗ್ರಾಹಕರಿಗೆ ಕೃಷಿ ಪರಿಕರಗಳು ಹಾಗೂ ಗೊಬ್ಬರ, ಹತ್ಯಾರು ವಿಭಾಗಗಳ ಮಳಿಗೆಗಳನು ಅರಂಭಿಸಿ ಉತ್ತ ಮಾದರಿಯಲ್ಲಿ ತನ್ನ ವ್ಯವಹಾರಗಳನು ಮಾಡುತ್ತಾ ಬಂದಿದೆ. ಕಳೆದ ಸಾಲಿನಲ್ಲಿ ಫೇಡರೇಶನ್ ಬ್ರಾಂ ಅಕ್ಕಿಯನ್ನು ಸಾರ್ವಜನಿಕವಾಗಿ ಪರಿಚಯಿಸಿ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.

 ಸ್ಪರ್ಧಾತ್ಮಕಯುಗದಲ್ಲಿ ಗ್ರಾಹಕರಿಗೆ ಸಂಸ್ಥೆಯ ನಿರ್ಧೇಶಕರ ಸಲಹೆಯಂತೆ ಮನೆ ಮತ್ತು ಕಟ್ಟಡ ನಿರ್ಮಾಣ ಮಾಡಲು ಉತ್ತಮ ದರ್ಜೆಯ ಗುಣಮಟ್ಟದ ಸಾಮಾಗ್ರಿಗಳನ್ನು ಒಂದೇ ಸೂರಿನೆಯಲ್ಲಿ ಗ್ರಾಹರಿಕೆ ನೀಡಲು ಉದ್ದೇಶಿಸಲಾಗಿದ್ದು. ಇದೀಗಾ ಉದ್ಘಾಟನೆಗೊಂಡು ಕನಸು ಸಹಕಾರಗೊಂಡಿದೆ. ಗ್ರಾಹಕರು ಸದೂಪಯೋಗ ಪಡಿಸಿಕೊಂಡು ಸಂಸ್ಥೆಯ ಎಳಿಗೆಗಾಗಿ ಸಹಕರಿಸುವಂತೆ ಮನವಿ ಮಾಡಿದರು.

ಸಂಸ್ಥೆಯ ಹಿರಿಯ ನಿರ್ದೇಶಕರಾದ ಮುಲ್ಲೆಯಂಗಡ ಎಂ. ಕುಟ್ಟಪ್ಪ ಅವರು ಮಾತನಾಡಿ ಸಂಸ್ಥೆಯು ಕೃಷಿಕರಿಗೆ ಸಹಾಕರಿಯಾಗಲು ಕೃಷಿಯೇತರ ಸಾಮಾಗ್ರಿಗಳನ್ನು ಒದಗಿಸುತ್ತಾ ತನ್ನ ಕಾರ್ಯವ್ಯಾಪ್ತಿಯನ್ನು ವೃದ್ಧಿಸಿದೆ. ಅಧುನಿಕತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಒಂದು ಕ್ಷೇತ್ರಕ್ಕೆ ಮಾತ್ರ ಸಿಮೀತವಾಗದೆ ವಿವಿಧ ಕ್ಷೇತ್ರದಲ್ಲಿ ತನ್ನ ಸೇವೆಯನು ಮಾಡಲು ಮುಂದಾಗಿ ಇದೀಗ ಬಹು ನಿರೀಕ್ಷಿತ ಕಟ್ಟಡ ಸಾಮಾಗ್ರಿಗಳ ಮಳಿಗೆಯನ್ನು ಅರಂಭಿಸಿ ಉತ್ತಮ ಸೇವೆಗೆ ಸಜ್ಜುಗೊಂಡಿದೆ ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಳಿಗೆ ಉದ್ಘಾಟನೆ ವೇಳೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೇಡರೇಶನ್) ಸಂಸ್ಥೆಯ ಉಪದ್ಯಕ್ಷರಾದ ತಾತಂಡ ಎಂ.ಕಾವೇರಪ್ಪ, ನಿರ್ಧೇಶಕರಾದ ಕಂಜಿತಙಡ ಮಂದಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಚೇನಂಡ ಈ ಗೀರಿಶ್ ಪೂಣಚ್ಚ, ಮೂಕೊಂಡ ಪಿ ಸುಬ್ರಮಣಿ, ಅಂಜಪರವಂಡ ಅನೀಲ್ ಮಂದಣ್ಣ, ಕೂತಂಡ ಸಚೀನ್ ಕುಟ್ಟಯ್ಯ, ಪುಲಿಯಂಡ ಎ ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ, ಪುಟ್ಟಿಚಂಡ ವೀಣಾ ಮಹೇಶ್, ಕೆ.ಆರ್ ವಿನೋದ್ ಮತ್ತು ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಎಂ. ಚಂದ್ರಕಾಂತ್ ಹಾಗೂ ಸಂಸ್ಥಎಯ ಸಿಬ್ಬಂದಿಗಳು ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ