ವಿರಾಜಪೇಟೆ: 2 ವರ್ಷದಲ್ಲೇ ಮುರಿದು ಬಿದ್ದ ಮೈದಾನದ ಗೇಟ್
ವಿರಾಜಪೇಟೆ: ತಾಲ್ಲೂಕು ಆಡಳಿತ ಕಚೇರಿ ಸಮೀಪದಲ್ಲಿರುವ ನವೀಕರಣಗೊಂಡ ವಿರಾಜಪೇಟೆ ತಾಲ್ಲೂಕು ಆಟದ ಮೈದಾನದ ಮುಖ್ಯ ಕಬ್ಬಿಣದ ಗೇಟ್ ಕೇವಲ 2 ವರ್ಷದಲ್ಲೇ ಮುರಿದು ಬಿದ್ದಿದೆ.
ಈ ಮೈದಾನವನ್ನು ಪ್ರತಿದಿನ ಹಲವಾರು ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಬಳಸುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲೇ ಗೇಟ್ ಮುರಿದು ಬಿದ್ದಿದ್ದರೂ ಸಂಬಂಧಪಟ್ಟ ಇಲಾಖೆ ಇದುವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರ ಸುರಕ್ಷತೆಯೂ ಪ್ರಶ್ನಾರ್ಹವಾಗಿದೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, "ವಿರಾಜಪೇಟೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿದೆ. ಆದರೆ ಕೆಲವು ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಅನುದಾನ ದುರ್ಬಳಕೆಯಾಗುತ್ತಿದೆ.
ಎರಡು ವರ್ಷವೂ ಬಾಳದ ಕಾಮಗಾರಿ ಅಭಿವೃದ್ಧಿಯಲ್ಲ, ಅದು ಸಾರ್ವಜನಿಕರ ಹಣದ ದುರ್ಬಳಕೆಯ ಪ್ರತೀಕ" ಎಂದು ಆರೋಪಿಸಿದರು. "ಈ ಕಾಮಗಾರಿಯ ಸಂಪೂರ್ಣ ತನಿಖೆ ನಡೆಸಬೇಕು. ಗುಣಮಟ್ಟದ ಪರಿಶೀಲನೆ ಮಾಡಿ ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು" ಎಂದು ಅವರು ಒತ್ತಾಯಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
