ವಿರಾಜಪೇಟೆ:ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
admincoorgdaily

ವಿರಾಜಪೇಟೆ:ಇಲ್ಲಿನ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಮಹಮ್ಮದ್ ರಾಫಿ ಅವರ ನೇತೃತ್ವದಲ್ಲಿ ವಿರಾಜಪೇಟೆ ಗೋಣಿಕೊಪ್ಪ ರಸ್ತೆಯ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ಕಛೇರಿಯ ಆವರಣದಲ್ಲಿ ನಡೆಯಿತು.
ವಿರಾಜಪೇಟೆ ನೆಹರು ನಗರದ ನಿವೃತ್ತ ಯೋಧರಾದ ಮುಷ್ತಾಕ್ ಅಹಮದ್ ಅವರು ಧ್ವಜಾರೋಹಣ ಮಾಡಿದರು.ನಂತರ ಟ್ರಸ್ಟ್ ವತಿಯಿಂದ ಮುಖ್ಯ ಅತಿಥಿಯನ್ನು ಸನ್ಮಾನ ಮಾಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಷ್ತಾಕ್ ಅಹಮದ್ ಅವರು,ಮೊದಲು ದೇಶ ಮುಖ್ಯ. ದೇಶದ ಸಂವಿಧಾನದ ಪ್ರಕಾರ ನಡೆಯಬೇಕು. ಯೋಧರಿಗೆ ಗೌರವ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ಎಲ್ಲಾ ಸದಸ್ಯರು ಹಾಜರಿದ್ದರು.