ವಿರಾಜಪೇಟೆ; ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಫೆ.13 ರಿಂದ 16 ರವೆರೆಗೆ ಮಹಾಶಿವರಾತ್ರಿ ಮಹೋತ್ಸವ

Feb 10, 2026 - 12:14
 0  82
ವಿರಾಜಪೇಟೆ; ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಫೆ.13 ರಿಂದ 16 ರವೆರೆಗೆ ಮಹಾಶಿವರಾತ್ರಿ ಮಹೋತ್ಸವ

ವಿರಾಜಪೇಟೆ: ವಿರಾಜಪೇಟೆಯ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ, ಸಾಧು ಶೆಟ್ಟಿ 24 ಮನೆ ತೆಲುಗು ಶೆಟ್ಟಿ ಸಂಘ ಇವರ ವತಿಯಿಂದ ತೆಲುಗು ಶೆಟ್ಟರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.13 ರಿಂದ 16 ರವೆರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಟಿ.ಪಿ. ಕೃಷ್ಣ ಅವರು ಅಖಿಲಾಂಡ ಕೋಟಿ, ಬ್ರಹ್ಮಾಂಡ ನಾಯಕಿ, ಆದಿಶಕ್ತಿ, ಲೋಕನಾಯಕಿ ಶ್ರಿ ಆದಿಮಲೈನೂರು ಅಮ್ಮನಾದ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಹಾ ಶಿವರಾತ್ರಿ ಮಹೋತ್ವವವನ್ನು ವಿಜೃಂಭಣೆಯಿಂದ ಆಚರಿಸಲು ಹತ್ತು ಕುಲಸ್ಥರು ತೀರ್ಮಾನಿಸಿದ್ದಾರೆ ಎಂದರು.

ಫೆ.13ರಂದು ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ದ್ವಜ ಸ್ಥಂಭ ಪೂಜೆ, ಫೆ.14ರಂದು ಶನಿವಾರ ಮದ್ಯಾಹ್ನ 12 ಗಂಡೆಗೆ ತಳಿಗೆ ಪೂಜೆ, ಕಾವಲು ದೇವತೆಗಳ ಪೂಜೆ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಫೆ.15ರಂದು ಬೆಳಿಗ್ಗೆ 7 ಗಂಟೆಗೆ ತಲಕಾವೇರಿಯಿಂದ ಶಕ್ತಿ ಆವಾಹನೆ, ಅಭಿಷೇಕ ಪೂಜೆ, ನಂತರ ಪ್ರಸಾದ ವಿನಿಯೋಗ, ರಾತ್ರಿ 7.30 ಗಂಟೆಗೆ ಪ್ರಥಮ ಕಾಲ ಅಭಿಷೇಕ ಪೂಜೆ, ಪ್ರಸಾದ ವಿನಿಯೋಗ, ರಾತ್ರಿ 10 ಗಂಟೆಗೆ ದ್ವಿತಿಯ ಕಾಲ ಅಭಿಷೇಕ ಪೂಜೆ, ಪ್ರಸಾದ ವಿನಿಯೋಗ, ಮಧ್ಯರಾತ್ರಿ 12 ಗಂಟೆಗೆ ತೃತೀಯ ಕಾಲ ಅಭಿಷೇಕ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ಫೆ.16ರಂದು ಸೋಮವಾರ ಪ್ರಾಥಃಕಾಲ 4 ಗಂಟೆಗೆ ಚತುರ್ಥ ಕಾಲ ಅಭಿಷೇಕ ಪೂಜೆ ನಂತರ ಪ್ರಸಾದ ವಿನಿಯೋಗ, ಮದ್ಯಾಹ್ನ 12 ಗಂಟೆಗೆ ಅಲಂಕಾರ ಪೂಜೆ ಹಾಗೂ ಅನ್ನ ಸಂತರ್ಪಣೆ, ತದನಂತರ ಶ್ರೀ ಅಂಗಾಳ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ಮುಖ್ಯ ಬೀದಿಗಳಲ್ಲಿ ಕಂಚಿ ಕಾಮಾಕ್ಷಿ ದೇವಾಲಯ ರಸ್ತೆಯಲ್ಲಿರುವ ಕಂಚಿ ಕಾಮಾಕ್ಷಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುತ್ತದೆ.

ರಾತ್ರಿ 8.30 ಗಂಟೆಗೆ ವಿಶೇಷಾರಾಧನೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರಾದ ಟಿ.ಪಿ. ಕೃಷ್ಣ ಕೋರಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0