ವಿರಾಜಪೇಟೆ: ನಂ.371 ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತದಿಂದ ಶಾರದಾ ಪೂಜೆ ಆಚರಣೆ
ವಿರಾಜಪೇಟೆ:ವಿರಾಜಪೇಟೆಯ ನಂ.371 ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತ ವಿರಾಜಪೇಟೆ ಇವರ ವತಿಯಿಂದ ಶುಕ್ರವಾರ ಮಹಿಳಾ ಸಮಾಜದ ಸಭಾಂಗಣದಲ್ಲಿ ಶಾರದಾ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಪೂಜೆಯ ಬಳಿಕ ಶಾರಾದ ದೇವಿಗೆ ನೈವೇದ್ಯ ಅರ್ಪಿಸಲಾಯಿತು.
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಮಹಿಳಾ ಸದಸ್ಯರು ದೇವರ ನಾಮ ಹಾಗೂ ಭಜನೆಯನ್ನು ಮಾಡಿದರು. ಪೂಜೆಯ ಬಳಿಕ ನೆರೆದ ಸದಸ್ಯರುಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ, ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಯಶೋಧ, ಹೆಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.