ವಿರಾಜಪೇಟೆ: ಸೇವಾ ಪ್ರತಿನಿಧಿಗಳ ಕೌಶಲ್ಯಾಭಿವೃದ್ಧಿ ತರಬೇತಿ
ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಇತ್ತೀಚೆಗೆ ವಿರಾಜಪೇಟೆಯ ಶಿಕ್ಷಕರ ಭವನದಲ್ಲಿ ನಡೆಯಿತು.
ಸೇವಾ ಪ್ರತಿನಿಧಿಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಉದ್ಘಾಟಿಸಿದರು.
ಬೆಳ್ತಂಗಡಿ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ರಮೇಶ್, ಬಿ.ಸಿ ಯೋಜನಾಧಿಕಾರಿ ಪ್ರವೀಣ್, ಕೊಡಗು ಜಿಲ್ಲೆಯ ಎಂವೈಎಸ್ ಯೋಜನಾಧಿಕಾರಿ ಪ್ರವೀಣ್, ಕೊಡಗು ಜಿಲ್ಲಾ ಆಡಿಟರ್ ಪ್ರಮೋದ್, ತಾಲೂಕಿನ ಯೋಜನಾಧಿಕಾರಿ ಹರೀಶ್ ಅವರು ಕಾರ್ಯಾಗಾರದ ವಿಚಾರವನ್ನು ಸೇವಾ ಪ್ರತಿನಿಧಿಗಳಿಗೆ ವಿವರಿಸಿ ಮಾಹಿತಿ ನೀಡಿದರು. ಈ ಸಂದರ್ಭ ವಿವಿಧ ವಲಯಗಳ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಪೋಟೋ:ಎಂಡಿಕೆ13ವಿಪಿಟಿ01ಎ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿಗಳ ಕೌಶಲ್ಯಾಭಿವೃದ್ಧಿ ತರಬೇತಿ ವಿರಾಜಪೇಟೆಯ ಶಿಕ್ಷಕರ ಭವನದಲ್ಲಿ ನಡೆಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
