ವಿರಾಜಪೇಟೆ; ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ ಹಬ್ಬಕ್ಕೆ ಕಟ್ಟು ಬೀಳುವ ಶಾಸ್ತ್ರ

Feb 13, 2026 - 00:29
 0  178
ವಿರಾಜಪೇಟೆ; ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ  ಹಬ್ಬಕ್ಕೆ ಕಟ್ಟು ಬೀಳುವ ಶಾಸ್ತ್ರ

ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಮತ್ತು ವಿವಿಧ ಧಾರ್ಮಿಕ ಕಾರ್ಯಗಳು, ಫೆ. 14ರಿಂದ ಆರಂಭವಾಗಲಿದ್ದು ಇದರ ಅಂಗವಾಗಿ ಫೆ.11ರಿಂದ ಹಬ್ಬದ ಕಟ್ಟು ಬಿದ್ದಿದೆ. ವಾರ್ಷಿಕೋತ್ಸವದ ಸಲುವಾಗಿ ಹಾಗೂ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ವಾರ್ಷೀಕೋತ್ಸವದಲ್ಲಿ ವಿವಿಧ ಪೂಜಾ ಪುನಸ್ಕಾರಗಳು, ದೇವರ ಜಳಕ, ನೃತ್ಯಬಲಿ ಪ್ರದರ್ಶನ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಡಳಿತ ಮಂಡಳಿ ಕೋರಿದೆ. ದೇವತಕ್ಕರಾಗಿ ಕೋದಂಡ ಕುಟುಂಬ ಹಾಗೂ ಭಂಢಾರ ತಕ್ಕರಾಗಿ ಚಂಗಚಂಡ ಕುಟುಂಬ ಕಾರ್ಯನಿರ್ವಹಿಸುತ್ತಿದ್ದು 14ರಂದು ಚಂಗಚಂಡ ಕುಟುಂಬದಿಂದ ಭಂಢಾರ ದೇವಾಲಯಕ್ಕೆ ಬರಲಿದೆ.

4 ದಿನಗಳ ಪೂಜೆಗಳು ನಡೆದ ಬಳಿಕ 18 ರಂದು ಶುದ್ದಕಲಶ ನಡೆದ ಬಳಿಕ ವಾರ್ಷಿಕ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚಂಡ ಚೇತನ್ ಬೆಳ್ಯಪ್ಪ, ಸಹ ಕಾರ್ಯದರ್ಶೀ ವಿಶ್ವನಾಥ್ ಬಬ್ಬಿ, ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0