ವಿರಾಜಪೇಟೆ: ದೇಗುಲ ಮತ್ತು ಮಳಿಗೆಯಲ್ಲಿ ಕಳ್ಳತನ
ವಿರಾಜಪೇಟೆ : ನಡು ಮುಂಜಾನೆಯ ಸಮಯದಲ್ಲಿ ನಗರದ ಮಳಿಗೆ ಮತ್ತು ದೇಗುಲದಲ್ಲಿ ಕಳ್ಳತನ ಎಸಗಿ ಪಾರಾರಿಯಾಗಿರುವ ಘಟನೆ ನಡೆದಿದೆ.
ವಿರಾಜಪೇಟೆ ನಗರದ ಎಫ್. ಎಂ.ಸಿ. ರಸ್ತೆಯ ಗಣೇಶ್ ವೈನ್ಸ್ ಮತ್ತು ಇತಿಹಾಸ ಪ್ರಸಿದ್ಧ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. 17-08-2026 ರ ನಡು ಮುಂಜಾನೆ 2-30 ರಿಂದ 2-45 ಗಂಟೆ ಸಮಯದಲ್ಲಿ ಮುಖ್ಯ ರಸ್ತೆಯ ವೈನ್ ಶಾಪ್ ನ ಬೀಗ ಮುರಿದು ಒಳಹೊಕ್ಕ ಅಪರಿಚಿತ ಕಳ್ಳ ನಗದು ಪಟ್ಟಿಯಲ್ಲಿ ಇರಿಸಲಾಗಿದ್ದ 8000/- ನಗದು ಹಾಗೂ ಎರಡು ಕ್ವಾರ್ಟರ್ ಬಾಟಲ್ ಅಪಹರಿಸಿ ಪರಾರಿಯಾಗಿದ್ದಾನೆ.
ಜೈನರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯ ಬೀಗ ಮುರಿದು ಗರ್ಭ ಗೃಹದ ಸನೀಹವಿದ್ದ ಭಂಡಾರವನ್ನು ಮುರಿದು ಒಳಗಿದ್ದ ಹಣ ತೆಗೆದು ಸ್ಥಳದಿಂದ ನಿರ್ಗಮಿಸಿದ್ದಾನೆ. ನಿತ್ಯ ಬರುವ ಅರ್ಚಕರು ನೋಡಿದಲ್ಲಿ ಬೀಗ ಮುರಿದಿರುವುದು ಕಂಡು ಬಂದಿದೆ. ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬೆರಳಚ್ಚು ಹಾಗೂ ವಿಧಿ ವಿಜ್ಞಾನ ಕೇಂದ್ರ ದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅದರಂತೆ ಮಳಿಗೆಯ ಗುತ್ತಿಗೆ ಪಡೆದಿರುವ ಕಾವೇರಪ್ಪ ಟಿ.ಟಿ.ಅವರು ಕಳ್ಳತನ ಬಗ್ಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿರುವ ಪೊಲೀಸರು ಅಪರಿಚಿತ ಕಳ್ಳನಿಗೆ ಬಲೆ ಬೀಸಿದ್ದು. ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಕಿಶೋರ್ ಕುಮಾರ್ ಶೆಟ್ಟಿ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
