ವಿರಾಜಪೇಟೆ;ಟ್ರಾಫಿಕ್ ರೂಲ್ಸ್ ಬ್ರೇಕ್; ತಂದೆ ಹಾಗೂ ಅಪ್ರಾಪ್ತ ಮಗನ ವಿರುದ್ಧ ಪ್ರಕರಣ ದಾಖಲು

Jan 17, 2026 - 16:05
 0  1.7k
ವಿರಾಜಪೇಟೆ;ಟ್ರಾಫಿಕ್ ರೂಲ್ಸ್ ಬ್ರೇಕ್; ತಂದೆ ಹಾಗೂ ಅಪ್ರಾಪ್ತ ಮಗನ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ

ವಿರಾಜಪೇಟೆ : ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆಯ ಪರಿಣಾಮ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ವಾಹನ ತಪಾಸಣೆ ವೇಳೆ ಚಾಲನೆಯಲ್ಲಿದ್ದ ಅಪ್ರಾಪ್ತನ ಮೇಲೆ ಮತ್ತು ವಾಹನದ ಮಾಲೀಕನಿಗೆ ದಂಡ ವಿಧಿಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಜಪೇಟೆ ಬಿಟ್ಟಂಗಾಲ ಗ್ರಾಮ ಅಂಬಟ್ಟಿ ನಿವಾಸಿ   ಟಿ.ಆರ್. ಪ್ರಭಾಕರ್ ವಾಹನ ಮಾಲೀಕರು ಮತ್ತು ವಾಹನ ಚಾಲನೆಯಲ್ಲಿದ್ದ ಅವರ ಮೇಲೆ ಮೋಟಾರು ಕಾಯ್ದೆ ಅನ್ವಯ ಪ್ರಕರಣ ದಾಖಲಾದ ವ್ಯಕ್ತಿಗಳು. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಎನ್.ಜೆ.ಲತಾ ಅವರು ಮತ್ತು ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಬಿಟ್ಟಂಗಾಲ ಜಂಕ್ಷನ್ ನಲ್ಲಿ ವಾಹನ ತಪಾಸಣೆ ಕೈಗೊಂಡಿದ್ದರು.

 ಈ ವೇಳೆ ದುಡುಕು ಮತ್ತು ನಿರ್ಲಕ್ಷ್ಯತನದಿಂದ ದ್ವಿಚಕ್ರ ಚಾಲನೆ ಮಾಡಿಕೊಂಡು ಪೆರುಂಬಾಡಿಯಿಂದ ವಿರಾಜಪೇಟೆ ನಗರಕ್ಕೆ ಆಗಮಿಸುವ ಸಾರ್ವಜನಿಕ ರಸ್ತೆಯಲ್ಲಿ ಬಂದಿದೆ.

 ಪೊಲೀಸ್ ಇಲಾಖೆಯ ಸಿಬ್ಬಂದಿಗಳು ವಾಹನ ತಪಾಸಣೆಗೆ ಒಳಪಡಿಸಿದ್ದಾರೆ. ವಾಹನ ದಾಖಲಾತಿ ಪರಿಶೀಲನೆ ವೇಳೆ ವಾಹನ ಚಾಲಕ ಅಪ್ರಾಪ್ತ ಎಂದು ತಿಳಿದು ಬಂದಿದೆ. ವಾಹನ ದಾಖಲೆಗಳು ಅಪ್ರಾಪ್ತನ ತಂದೆಯ ಹೆಸರಿನಲ್ಲಿದ್ದು,ಅಪ್ರಾಪ್ತ ಎಂದು ತಿಳಿದು ವಾಹನ ಚಾಲನೆಗೆ ನೀಡಿರುವುದು ಕಾನೂನು ಬಾಹಿರ,ಹೊಂಡ ಆಕ್ಟೀವಾ ದ್ವಿಚಕ್ರ ವಾಹನ ಸಂಖ್ಯೆ KA-12-L-2800 ವಾಹನ ವನ್ನು ಮುಟ್ಟುಗೋಲು ಹಾಕಿಕೊಂಡು ವಾಹನ ಮಾಲೀಕರಿಗೆ ಹಾಗೂ ಚಾಲಕನಿಗೆ ಕಲಂ 281 ಬಿ.ಎನ್.ಎಸ್. ಮತ್ತು 199 (ಎ) ಐಎಂವಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 1
Wow Wow 1