ವಿರಾಜಪೇಟೆ: ಪಂಜರಪೇಟೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎ.ಎಸ್ ಪೊನ್ನಣ್ಣ
ವಿರಾಜಪೇಟೆ: ಪುರಸಭೆ ವ್ಯಾಪ್ತಿಯ ಪಂಜರಪೇಟೆಯಲ್ಲಿ, ಶ್ರೀ ವಿನಾಯಕ ಸೇವಾ ಸಮಿತಿ-ಪಂಜರಪೇಟೆ, ಇವರು ಆಚರಿಸುತ್ತಿರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಇಂದಿನಿಂದ ಆಚರಿಸಲ್ಪಡುವ ಶ್ರೀ ಮಹಾ ಗಣಪತಿ ಉತ್ಸವದ, ಮೂರ್ತಿ ಪ್ರತಿಷ್ಠಾಪನ ಸಂದರ್ಭ ಉಪಸ್ಥಿತರಿದ್ದ ಶಾಸಕರು ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಅತ್ಯಂತ ವಿಜ್ಯಂಬಣೆಯಿಂದ ಆಚರಿಸಲ್ಪಡುವ ಈ ಹಬ್ಬವು ನಾಡಿನ ಸರ್ವ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಮಾನ್ಯ ಶಾಸಕರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.