ವಿರಾಜಪೇಟೆ:20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ,ಸ್ಕೂಟಿ ಚಲಾಯಿಸುವುದರ ಮೂಲಕ ಉದ್ಘಾಟನೆ ಮಾಡಿದ ಶಾಸಕ‌ ಎಎಸ್ ಪೊನ್ನಣ್ಣ

Nov 22, 2025 - 19:47
Nov 22, 2025 - 19:48
 0  695
ವಿರಾಜಪೇಟೆ:20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ,ಸ್ಕೂಟಿ ಚಲಾಯಿಸುವುದರ ಮೂಲಕ ಉದ್ಘಾಟನೆ ಮಾಡಿದ ಶಾಸಕ‌ ಎಎಸ್ ಪೊನ್ನಣ್ಣ

ವಿರಾಜಪೇಟೆ:ಪುರಸಭಾ ವ್ಯಾಪ್ತಿಯ, ನೆಹರು ನಗರದಲ್ಲಿ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ₹ 20 ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಂಡ, ನೂತನ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು ಇಂದು ಶಾಸಕರು ನೆರವೇರಿಸಿದರು.

ಉದ್ಘಾಟನೆಯ ಬಳಿಕ, ತಾವೇ ಸ್ವತಹ ನೂತನ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುವ ಮೂಲಕ ಉದ್ಘಾಟನೆಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.

 ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ಸದಸ್ಯರು ಬೆನ್ನಿ, ರಾಫಿ, ಅತಿಫ್ ಮನ್ನ, ಹಮೀದ್, ದಿನೇಶ್ ನಂಬಿಯರ್, ಪುರಸಭೆ ಮುಖ್ಯ ಅಧಿಕಾರಿ ನಾಚಪ್ಪ, ವಿರಾಜಪೇಟೆ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಬೀರ್, ಜೋಕಿಮ್, ಮಂಜುನಾಥ್, ಸಂತೋಷ್, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0