ವಿಶಾಲ್ ಉತ್ತಪ್ಪ ಹಾಗೂ ಹನ್ಸಿಕ ರಾಕೇಶ್ ಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿ
admincoorgdaily

ಮಡಿಕೇರಿ; ಗುಮ್ಮಟ ನಗರಿ ವಿಜಯಪುರದಲ್ಲಿ ಇದೇ ತಿಂಗಳು 17 ರಿಂದ 23 ರವರೆಗೆ ನಡೆದ ಯೊನೆಕ್ಸ್ ಸನ್ ರೈಸ್ ರಾಜ್ಯಮಟ್ಟದ 15 ಮತ್ತು 17 ವರ್ಷದೊಳಗಿನ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೊಡಗಿನ ವಿಶಾಲ್ ಉತ್ತಪ್ಪ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಹಾಗೂ ಮಿಶ್ರ ಡಬಲ್ಸ್ ನಲ್ಲಿ ಮೈಸೂರಿನ ಹನ್ಸಿಕ ರಾಕೇಶ್ ರವರ ಜೊತೆಗೂಡಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಇವರು ಮೈಸೂರಿನ ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾರೆ ,ಇದೀಗ ಇವರು ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ನಡೆದ( Grass Root program)ತಳಮಟ್ಟದ ಕಾರ್ಯಕ್ರಮದಿಂದ ಆಯ್ಕೆಯಾಗಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಹೈದರಾಬಾದಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.