ಮತವೇ ಪ್ರಜಾಪ್ರಭುತ್ವದ ಶಕ್ತಿ: ಬಿಎಲ್‌ಒಗಳಿಗೆ ಸಹಕರಿಸಿ,ಶಾಸಕ ಮಂತರ್ ಗೌಡ

Jun 30, 2026 - 13:15
 0  160
ಮತವೇ ಪ್ರಜಾಪ್ರಭುತ್ವದ ಶಕ್ತಿ: ಬಿಎಲ್‌ಒಗಳಿಗೆ ಸಹಕರಿಸಿ,ಶಾಸಕ ಮಂತರ್ ಗೌಡ

ಮಡಿಕೇರಿ, ಜೂನ್ 29: "ಪ್ರಜಾಪ್ರಭುತ್ವದ ಅಡಿಪಾಯ ನಿಮ್ಮ ಮತ. ಜವಾಬ್ದಾರಿ ಮರೆಯಬೇಡಿ" ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಜೂನ್ 30ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ -SIR ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರು ನಗರೂರು ನಿವಾಸದಲ್ಲಿ ಬಿಎಲ್‌ಒಗಳಿಗೆ ಅಗತ್ಯ ದಾಖಲೆ ಹಾಗೂ ಮಾಹಿತಿ ನೀಡಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

"ನಾಗರಿಕರು ಹಾಗೂ ಅರ್ಹ ಮತದಾರರು ಮನೆಗೆ ಬರುವ ಬೂತ್ ಮಟ್ಟದ ಅಧಿಕಾರಿ -BLOಗಳಿಗೆ ಪೂರ್ಣ ಸಹಕಾರ ನೀಡಿ, ಅಗತ್ಯ ಮಾಹಿತಿ ಒದಗಿಸಿ. ನಿಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಅವರು ಕೋರಿದ್ದಾರೆ.

"ಪ್ರಜಾಪ್ರಭುತ್ವ ಕೇವಲ ಆಡಳಿತ ವ್ಯವಸ್ಥೆಯಲ್ಲ, ಪ್ರತಿಯೊಬ್ಬ ನಾಗರಿಕನ ಧ್ವನಿ. ಆ ಧ್ವನಿಗೆ ಶಕ್ತಿ ತುಂಬುವುದು ನಮ್ಮ ಮತ. ನಾವು ಚಲಾಯಿಸುವ ಪ್ರತಿಯೊಂದು ಮತವೂ ದೇಶದ ಭವಿಷ್ಯ ರೂಪಿಸುವ ಪವಿತ್ರ ಕರ್ತವ್ಯ" ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0