ಮತದಾರರ ಪಟ್ಟಿ ಪರಿಷ್ಕರಣೆ: ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರಿಗೆ ಎನ್ಯೂಮರೇಷನ್ ಫಾರ್ಮ್ ವಿತರಣೆ
admincoorgdaily

ಮಡಿಕೇರಿ, ಜೂನ್ 29: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ -SIR ಅಂಗವಾಗಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮತ್ತು ತಹಶೀಲ್ದಾರ್ ಶ್ರೀಧರ ಅವರು ಮಂಗಳವಾರ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರ ಮಡಿಕೇರಿ ನಗರದ ನಿವಾಸಕ್ಕೆ ಭೇಟಿ ನೀಡಿ ಗಣತಿ ನಮೂನೆ -ಎನ್ಯೂಮರೇಷನ್ ಫಾರ್ಮ್ ವಿತರಿಸಿದರು.
ಜೂನ್ 30ರಿಂದ ಜುಲೈ 29ರವರೆಗೆ ರಾಜ್ಯಾದ್ಯಂತ ಮನೆ-ಮನೆ ಭೇಟಿ ಮೂಲಕ ಮತದಾರರ ಮಾಹಿತಿ ಸಂಗ್ರಹ ನಡೆಯಲಿದೆ. ಇದರ ಭಾಗವಾಗಿ ಅಧಿಕಾರಿಗಳು ಗಣ್ಯರ ಮನೆಗಳಿಗೂ ಭೇಟಿ ನೀಡಿ ನಮೂನೆ ವಿತರಣೆ ಆರಂಭಿಸಿದ್ದಾರೆ.