ವಾಂಟೆಡ್ ಬಾಲ ಚಿತ್ರ: ಗೋಣಿಕೊಪ್ಪದಲ್ಲಿ ಪ್ರದರ್ಶನ
admincoorgdaily

ಮಡಿಕೇರಿ: ಕೊಡಗಿನ ಪ್ರತಿಭೆಗಳಿಂದಲೇ, ಕೊಡಗಿನವರಿಗಾಗಿಯೇ ನಿರ್ಮಾಣವಾದ ವಾಂಟೆಡ್ ಬಾಲ ಚಿತ್ರ ಆ.೭,೮,೯ ರಂದು ಗೋಣಿಕೊಪ್ಪದಲ್ಲಿ ಪ್ರದರ್ಶನ ಕಾಣಲಿದೆ ಎಂದು ನಟ ಹಾಗೂ ಸಿನಿಮಾ ನಿದೇರ್ಶಕ ಸಂಕೇತ್ ಶಿವಪ್ಪ ತಿಳಿಸಿದರು.
ಶಾರ್ಟ್ ಫಿಲ್ಮ್ ಆಗಿ ಆರಂಭಗೊಂಡು, ಸಿನಿಮಾಸಕ್ತರ ಪ್ರೋತ್ಸಾಹದಿಂದ ೮೫ ನಿಮಿಷದ ಪೂರ್ಣ ಪ್ರಮಾಣದ ಚಿತ್ರವಾಗಿ ರೂಪುಗೊಂಡಿದೆ. ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ಕೂರ್ಗ್ ರೆಜಿಮೆಂಟ್ ಕೃತಿಯಿಂದ ಪ್ರೇರಿತ ಈ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ, ವಲಸೆ ಕಾರ್ಮಿಕರ ಪ್ರಭಾವದಂತಹ ವಾಸ್ತವ ವಿಚಾರಗಳು ಚರ್ಚೆಯಾಗಿವೆ. ಚಿತ್ರದ ನಿರ್ದೇಶನದಿಂದ ನಟನೆಯವರೆಗೆ ಎಲ್ಲವೂ ಸ್ಥಳೀಯರೇ ಆಗಿದ್ದು, ಸಂಕೇತ್ ಶಿವಪ್ಪ, ವಿಷ್ಣು, ಪ್ರಮೀತಾ, ಗಗನ್ ಗಣಪತಿ, ರಮೇಶ್ ನಾಗರಹೊಳೆ ಸೇರಿದಂತೆ ಎಲ್ಲಾ ಕಲಾವಿದರು ಕೊಡಗಿನವರೇ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಕೂರ್ಗ್ ರೆಜಿಮೆಂಟ್ ಕೃತಿಕಾರ ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ನೃತ್ಯ ಸಂಯೋಜಕರ ವಿಷ್ಣು, ನಟ ಗಗನ್ ಗಣಪತಿ, ಕಲಾವಿದರಾದ ಸುಮನ್ ಕಾಡ್ಯಮಡ ಉಪಸ್ಥಿತರಿದ್ದರು.