ಕುಶಾಲನಗರದಲ್ಲಿನ ತ್ಯಾಜ್ಯ; ಸಮರ್ಪಕ ನಿರ್ವಹಣೆಗೆ ಮನವಿ

Jul 24, 2026 - 23:11
 0  1
ಕುಶಾಲನಗರದಲ್ಲಿನ ತ್ಯಾಜ್ಯ; ಸಮರ್ಪಕ ನಿರ್ವಹಣೆಗೆ ಮನವಿ

ಮಡಿಕೇರಿ ಜು.24:-ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(ಎಂಒಇಎಫ್‍ಸಿಸಿ), ಭಾರತ ಸರ್ಕಾರವು ಪರಿಸರ (ನಿರ್ಮಾಣ ಮತ್ತು ನೆಲಸಮ) ತ್ಯಾಜ್ಯ ನಿರ್ವಹಣಾ ನಿಯಮಗಳು, 2025 ಅನ್ನು ಅಧಿಸೂಚನೆಗೊಳಿಸಿದ್ದು, ಈ ನಿಯಮಗಳು 2026 ರ ಏಪ್ರಿಲ್, 01 ರಿಂದ ಜಾರಿಗೆ ಬರಲಿವೆ. ಈ ನಿಯಮಗಳು 2016 ರ ನಿಯಮಗಳನ್ನು ಬದಲಿಸಿ ನಿರ್ಮಾಣ ಮತ್ತು ನೆಲಸಮ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ, ಮರುಬಳಕೆ ಹಾಗೂ ಮರು ಸಂಸ್ಕರಣೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. 

       ಸಾರ್ವಜನಿಕರು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳು ಪಾಲಿಸಬೇಕಾದ ಪ್ರಮುಖ ಅಂಶಗಳು : ನಿರ್ಮಾಣ, ನೆಲಸಮ, ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಿಂದ ಉಂಟಾಗುವ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸಿ ಸಂಗ್ರಹಿಸಬೇಕು.

 ಕಾಂಕ್ರೀಟ್, ಇಟ್ಟಿಗೆ, ಲೋಹ, ಮರ, ಗಾಜು, ಪ್ಲಾಸ್ಟಿಕ್ ಹಾಗೂ ಮಣ್ಣನ್ನು ಪ್ರತ್ಯೇಕವಾಗಿ ವಿಂಗಡಿಸಿ ಅಧಿಕೃತ ಸಂಗ್ರಹಣಾ ಕೇಂದ್ರ ಅಥವಾ ಮರುಸಂಸ್ಕರಣಾ ಘಟಕಕ್ಕೆ ಒಪ್ಪಿಸಬೇಕು.  

 ರಸ್ತೆ, ಖಾಲಿ ಜಾಗ, ಕಾಲುವೆ, ಕೆರೆ, ನದಿ, ಸಾರ್ವಜನಿಕ ಸ್ಥಳ ಅಥವಾ ಸರ್ಕಾರಿ ಭೂಮಿಯಲ್ಲಿ ನಿರ್ಮಾಣ ತ್ಯಾಜ್ಯವನ್ನು ಎಸೆಯುವುದು ಕಾನೂನು ಬಾಹಿರವಾಗಿದೆ.

ದೊಡ್ಡ ನಿರ್ಮಾಣ ಯೋಜನೆಗಳು ನಿರ್ಮಾಣ ಮತ್ತು ನೆಲಸಮ ತ್ಯಾಜ್ಯ ನಿರ್ವಹಣಾ ಯೋಜನೆ(ಸಿ ಮತ್ತು ಡಿ) Waste Management Plan) ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು.

ನಿರ್ಮಾಣ ಸಾಮಾಗ್ರಿಗಳ ಉತ್ಪಾದಕರು ಹಾಗೂ ಸಂಬಂಧಿತ ಸಂಸ್ಥೆಗಳು ವಿಸ್ತರಿತ ಉತ್ಪಾದಕರ ಜವಾಬ್ದಾರಿ (Extended Producer Responsibility-EPR) ನಿಯಮಗಳನ್ನು ಪಾಲಿಸಬೇಕು.

ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪರಿಸರ ಪರಿಹಾರ (Environmental Compensation) ಸೇರಿದಂತೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

      ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ನಿರ್ಮಾಣ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅಧಿಕೃತ ಸಂಗ್ರಹಣಾ ವ್ಯವಸ್ಥೆಯನ್ನು ಮಾತ್ರ ಬಳಸಿ, ಮರು ಬಳಕೆ ಮತ್ತು ಮರು ಸಂಸ್ಕರಣೆಗೆ ಉತ್ತೇಜನ ನೀಡಿ. ಸ್ವಚ್ಛ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ನಗರ ನಿರ್ಮಾಣಕ್ಕೆ ಸಹಕರಿಸಿ. ಹೆಚ್ಚಿನ ಮಾಹಿತಿಗೆ ಕುಶಾಲನಗರ ಪುರಸಭೆಯ ಕಚೇರಿಯ ಆರೋಗ್ಯ ಶಾಖೆಯಲ್ಲಿ ಸಂಪರ್ಕಿಸಬಹುದು ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ. ಸ್ವಚ್ಛ ಪರಿಸರ-ನಮ್ಮೆಲ್ಲರ ಜವಾಬ್ದಾರಿ. ನಿರ್ಮಾಣ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿ - ಪ್ರಕೃತಿಯನ್ನು ಸಂರಕ್ಷಿಸಿ ಎಂದು ಪುರಸಭೆ ಮುಖ್ಯಾಧೀಕಾರಿ ಗಿರೀಶ್ ಅವರು ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0