ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗಳ ತೂಕ ಪರೀಕ್ಷೆ: ಅತೀ ಹೆಚ್ಚು ತೂಕ ಹೊಂದಿರುವ ಆನೆ ಯಾವುದು ಗೊತ್ತೇ!!

Aug 12, 2025 - 12:31
Aug 12, 2025 - 12:31
 0  75
ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗಳ ತೂಕ ಪರೀಕ್ಷೆ:   ಅತೀ ಹೆಚ್ಚು ತೂಕ ಹೊಂದಿರುವ ಆನೆ ಯಾವುದು ಗೊತ್ತೇ!!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಈ ತೂಕ ಪರೀಕ್ಷೆಯಲ್ಲಿ 25 ವರ್ಷದ ಭೀಮನೇ ಅತೀ ಹೆಚ್ಚು ತೂಕ ಹೊಂದಿರುವ ಆನೆಯಾಗಿದ್ದು, ಆನಂತರ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯು 2ನೇ ಸ್ಥಾನದಲ್ಲಿದೆ. ನಗರದ ಧನ್ವಂತರಿ ರಸ್ತೆಯಲ್ಲಿರುವ ತೂಕ ಕೇಂದ್ರದಲ್ಲಿ ತೂಕ ಪರೀಕ್ಷೆ ಮಾಡಲಾಯಿತು. ಅದರಲ್ಲಿ 25 ವರ್ಷದ ಭೀಮ ಅತೀ ಹೆಚ್ಚು ತೂಕ ಇರುವ ಆನೆಯಾಗಿದೆ. ಅಭಿಮನ್ಯು-5,360 ಕೆ.ಜಿ., ಧನಂಜಯ-5,310 ಕೆ.ಜಿ., ಕಾವೇರಿ-3,010 ಕೆ.ಜಿ., ಲಕ್ಷ್ಮಿ - 3,730 ಕೆ.ಜಿ., ಭೀಮ- 5,465 ಕೆ.ಜಿ., ಏಕಲವ್ಯ - 5,305 ಕೆ.ಜಿ., ಮಹೇಂದ್ರ - 5,120 ಕೆ.ಜಿ., ಕಂಜನ್ - 4,880 ಕೆ.ಜಿ., ಪ್ರಶಾಂತ - 5,110 ಕೆ.ಜಿ. ತೂಕ ಬಂದಿವೆ. ಡಿಸಿಎಫ್ ಪ್ರಭುಗೌಡ ಮಾತನಾಡಿ, "ಈ ಬಾರಿ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ 9 ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲ ಆನೆಗಳು ಆರೋಗ್ಯವಾಗಿವೆ. ಕಳೆದ ಬಾರಿ ದಸರಾದಲ್ಲಿ ಭಾಗವಹಿಸಿ ವಾಪಸ್ ಕಾಡಿಗೆ ಹೋಗುವಾಗ ಇದ್ದ ತೂಕವನ್ನೇ ಉಳಿಸಿಕೊಂಡಿರುವ ಆನೆಗಳು ಎಲ್ಲವೂ ಆರೋಗ್ಯವಾಗಿವೆ" ಎಂದು ಮಾಹಿತಿ ನೀಡಿದರು. "ಆನೆಗಳ ಆರೋಗ್ಯ ಹಾಗೂ ಜಂಬೂಸವಾರಿ ಮೆರವಣಿಗೆಗೆ ಯಾವ ರೀತಿ ಪ್ರೋಟೀನ್​ಗಳು, ವಿಶೇಷ ಆಹಾರ ನೀಡಬೇಕು ಎಂಬುದನ್ನು ತಿಳಿಯಲು ಇಂದು ತೂಕ ಪರೀಕ್ಷೆ ಮಾಡಲಾಯಿತು. ಇಂದು ಅರಣ್ಯಭವನದಲ್ಲಿ ವೈದ್ಯರ ಮೀಟಿಂಗ್ ಮಾಡಿ ಅಂತಿಮವಾಗಿ ಯಾವ ರೀತಿ ಆಹಾರ ನೀಡಬೇಕು ಎಂಬುದನ್ನು ತೀರ್ಮಾನ ಮಾಡಲಾಗುತ್ತದೆ. ಅದರಂತೆ ನಾಳೆಯಿಂದ ವಿಶೇಷ ಆಹಾರ ಜೊತೆಗೆ ತಾಲೀಮು ನಡೆಸಲಾಗುವುದು" ಎಂದು ಹೇಳಿದರು.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0