ಗಂಡನ‌‌ ಕೊಲೆಗೆ ಸುಪಾರಿ‌ ಕೊಟ್ಟ ಪತ್ನಿ:ಏಳು ವರ್ಷಗಳ ಬಳಿಕ‌ ಕೊಲೆ ರಹಸ್ಯ ಬಯಲು

Nov 22, 2025 - 23:49
 0  2.9k
ಗಂಡನ‌‌ ಕೊಲೆಗೆ ಸುಪಾರಿ‌ ಕೊಟ್ಟ ಪತ್ನಿ:ಏಳು ವರ್ಷಗಳ ಬಳಿಕ‌ ಕೊಲೆ ರಹಸ್ಯ ಬಯಲು
Photo credit: public tv (ಫೋಟೋ:ಕೊಲೆ ಆರೋಪಿಗಳು)

ಕಲಬುರಗಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಪತ್ನಿ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಸಹಜ ಸಾವಿನಂತೆ ಬಿಂಬಿಸಿ ಅಂತ್ಯಸಂಸ್ಕಾರ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

 ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ಬೀರಪ್ಪ ಎಂಬಾತನ ಕೊಲೆಗೆ ಆರೋಪಿಗಳು ಸುಪಾರಿ ಪಡೆದಿದ್ದರು. ಇದೀಗ ಬೀರಪ್ಪನ ಹೆಂಡತಿ ಶಾಂತಾಬಾಯಿ ಕೊಲೆಗೆ ಸುಪಾರಿ ನೀಡಿರೋದು ಬೆಳಕಿಗೆ ಬಂದಿದೆ.

ಅಸಹಜ ಸಾವು ಎಂದು ಬಿಂಬಿಸಿ ಹೆಂಡತಿ ಮತ್ತು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಏಳು ವರ್ಷಗಳ ಬಳಿಕ ಅಸಹಜ ಸಾವಿನ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ ದುಡ್ಡಿನ ವಿಚಾರದ ವಿಡಿಯೋ ಇದೀಗ ವೈರಲ್ ಆಗಿದೆ.

 ದುಡ್ಡು ಕೊಡದೆ ಇರೋದಕ್ಕೆ ಕೊಲೆ ಆರೋಪಿ ಪೋನ್‌ನಲ್ಲಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಕೊಲೆ ಆರೋಪಿ ಮಹೇಶ್ ಪೋನ್‌ನಲ್ಲಿ ಮಹಿಳೆ ಜೊತೆ ಮಾತಾಡಿರುವ ವೀಡಿಯೋ ವೈರಲ್ ಆಗಿದ್ದರ ಬೆನ್ನಲ್ಲೇ ಬೀರಪ್ಪ ಸಹೋದರ ಕೊಲೆ ದೂರು ದಾಖಲಿಸಿದ್ದಾರೆ.

ಕೊಲೆ ದೂರಿನ ಸಂಬಂಧ ಬೀರಪ್ಪನ ಹೆಂಡತಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 4
Funny Funny 0
Angry Angry 0
Sad Sad 2
Wow Wow 0