ಬೆತ್ತಲೆ ಓಡಾಟ, ಪತಿಯ ವಿಚಿತ್ರ ವರ್ತನೆಗೆ ಪತ್ನಿ ಕಂಗಾಲು

Dec 31, 2025 - 01:08
Dec 31, 2025 - 01:10
 0  2.1k
ಬೆತ್ತಲೆ ಓಡಾಟ, ಪತಿಯ ವಿಚಿತ್ರ ವರ್ತನೆಗೆ ಪತ್ನಿ ಕಂಗಾಲು
Photo credit: TV09

ಬೆಂಗಳೂರು, ಡಿ. 30: ಮದುವೆಯಾದ ಬಳಿಕ ಪತಿಯ ಅಸಹಜ ವರ್ತನೆ ಹಾಗೂ ಲೈಂಗಿಕ ಕಿರುಕುಳದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ  ನಡೆದಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, ದಂಪತಿ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗದ ಪರಿಚಯ ಪ್ರೀತಿಗೆ ತಿರುಗಿ, ಕುಟುಂಬಗಳ ಒಪ್ಪಿಗೆಯೊಂದಿಗೆ ಸೆಪ್ಟೆಂಬರ್ 3ರಂದು ಚಿಂತಾಮಣಿಯಲ್ಲಿ ವಿವಾಹ ನೆರವೇರಿತ್ತು. ಆರಂಭದಲ್ಲಿ ದಾಂಪತ್ಯ ಜೀವನ ಸುಗಮವಾಗಿದ್ದರೂ, ಬಳಿಕ ಪತಿ ಮಂಜುನಾಥ್ ಅವರ ವರ್ತನೆ ಅಸಾಮಾನ್ಯವಾಗಿ ಬದಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪತಿ ಮೊಬೈಲ್‌ ಫೋನ್‌ ನೋಡುತ್ತಲೇ ಲೈಂಗಿಕ ಕ್ರಿಯೆಗೆ ಒತ್ತಾಯಿಸುವುದು, ಮನೆಯೊಳಗೆ ಅತ್ತೆ–ಮಾವ ಅವರ ಎದುರಲ್ಲೇ ಬಟ್ಟೆ ಧರಿಸದೇ ತಿರುಗಾಡುವುದು, ಪ್ಯಾಸೇಜ್‌ವರೆಗೆ ತೆರಳಿ ನೆರೆಹೊರೆಯವರಿಗೆ ಮುಜುಗರ ಉಂಟುಮಾಡುವುದು ಸೇರಿದಂತೆ ಅನೌಚಿತ್ಯಪೂರ್ಣ ವರ್ತನೆ ತೋರಿಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವರ್ತನೆಯಿಂದ ತಾನು ತೀವ್ರ ಮಾನಸಿಕ ಕಳವಳಕ್ಕೆ ಒಳಗಾಗಿದ್ದೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಇದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದು, ಮನೆ ಬಿಟ್ಟು ಹೋಗಿ ನಂತರ ಮರಳಿ ಬಂದು ತಾನೂ ತನ್ನ ತಾಯಿಯನ್ನೂ ನಿಂದಿಸಿ ಹಲ್ಲೆಗೆ ಯತ್ನಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಕೃತ್ಯಗಳಿಗೆ ಅತ್ತೆ ಮತ್ತು ಮಾವ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಇದೆ.

ಸಂತ್ರಸ್ತೆಯ ದೂರಿನ ಮೇರೆಗೆ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 4
Angry Angry 2
Sad Sad 1
Wow Wow 0