Kodagu

ಕಾಡುಕೋಣ ಬೇಟೆ:ಇಬ್ಬರ ಬಂಧನ

admincoorgdaily

ಕಾಡುಕೋಣ ಬೇಟೆ:ಇಬ್ಬರ ಬಂಧನ

ಮಡಿಕೇರಿ: ಮಂಗಳೂರು ಉಪ ವಿಭಾಗದ ಸುಳ್ಯ ಅರಣ್ಯ ವಲಯದ ಪೂಮಾಲೆ ರಕ್ಷಿತಾರಣ್ಯದಲ್ಲಿ ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ 2 ಆರೋಪಿಗಳನ್ನು ಕೊಡಗು ಸಂಪಾಜೆ ವಲಯ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಗೌತಮ್ ಕುಕ್ಕೇಟಿ‌ (24) ಎಂ. ಚೆಂಬು,ಶರತ್ ಕೊಳಂಗಾಯ*(36), ಕೆ. ಪೆರಾಜೆ ಗ್ರಾಮ, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

 ಅರಣ್ಯ ಸಿಬ್ಬಂದಿಗಳು ಆರೋಪಿಗಳಿಂದ ಮಾರುತಿ ಇಕೋ ಕಾರು KA 12 MC 0370, ಅಂದಾಜು 17 ಕೆ.ಜಿ ಕಾಡುಕೋಣ ಮಾಂಸ ಮತ್ತು ಒಂದು ಏರ್ ಗನ್ ವಶಕ್ಕೆ ಪಡೆದಿದ್ದಾರೆ. ಬೇಟೆಗೆ ಬಳಸಿದ ಬಂದೂಕು ಮಾತ್ರ ಇನ್ನೂ ಪತ್ತೆಯಾಗಿಲ್ಲ.

 ಸಂಪಾಜೆ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ವಿಜಯೇಂದ್ರ ಕುಮಾರ್, ಸುರೇಶ್, ಶ್ರೀರಕ್ಷಾ ಹಾಗೂ ಸಿಬ್ಬಂದಿ ಯಮುನಾ ಕೋಳೂರು, ಕಾರ್ತಿಕ್, ಶ್ರೀಕಾಂತ್, ಸಿದ್ದರಾಮ ನಾಟೆಕಾರ್, ಸಿದ್ದೇಶ್.ಎಂ ದಾಳಿಯಲ್ಲಿ ಭಾಗಿಯಾಗಿದ್ದರು. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.