ಕೆದಕಲ್ ಬಳಿ ಸ್ಕೂಟಿ ಮತ್ತು ಟಿಟಿ ವ್ಯಾನ್ ಮೇಲೆ ಕಾಡುಕೋಣ ದಾಳಿ;ಮಹಿಳೆಗೆ ಗಂಭೀರ ಗಾಯ

Apr 1, 2026 - 21:37
Apr 1, 2026 - 21:54
 0  1.8k
ಕೆದಕಲ್ ಬಳಿ ಸ್ಕೂಟಿ ಮತ್ತು ಟಿಟಿ ವ್ಯಾನ್ ಮೇಲೆ ಕಾಡುಕೋಣ ದಾಳಿ;ಮಹಿಳೆಗೆ ಗಂಭೀರ ಗಾಯ

ಸುಂಟಿಕೊಪ್ಪ;ಕೆದಕಲ್ ಬಳಿ ಕಾಡು ಕೋಣ‌ ದಾಳಿಯಿಂದಾಗಿ ಮಹಿಳೆ‌ಗೆ ಗಂಭೀರ ಗಾಯಗಳಾಗಿದೆ. ಚಲಿಸುತ್ತಿದ್ದ ಟಿಟಿ ವ್ಯಾನ್, ಸ್ಕೂಟಿ‌ ಮೇಲೆ ಕಾಡು ಕೋಣ ದಾಳಿ ನಡೆಸಿದೆ.

 ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆಗೆ ತೀವ್ರ ಗಾಯವಾಗಿದ್ದು, ನಝೀಮ‌ ತೀವ್ರ ಗಾಯಗೊಂಡ ಮಹಿಳೆ.ಸುಂಟಿಕೊಪ್ಪ‌ ಸಮೀಪ ಕೆದಕಲ್‌ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಚಲಿಸುತ್ತಿದ್ದ ವಾಹನಗಳ ಮೇಕೆ ಏಕಾಏಕಿ ತೋಟದಿಂದ ನುಗ್ಗಿ‌ ಬಂದ‌ ಕಾಡು ಕೋಣ ದಾಳಿ ನಡೆಸಿದೆ.

ಕೇರಳ‌ ಮೂಲದ‌ ಟಿಟಿ ವಾಹನದ ಮೇಲೂ ದಾಳಿಯಾಗಿದ್ದು, ಟಿಟಿ ವಾಹನ ಜಖಂಗೊಂಡಿದ್ದು, ಸ್ಕೂಟಿ ಚಲಾಯಿಸುತ್ತಿದ್ದ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಾಳುಗಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಗಂಭೀರ ಗಾಯಗೊಂಡಿರುವ ಮಹಿಳೆಯ ಕಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 5
Wow Wow 1