Kodagu

ಅರಣ್ಯ ಇಲಾಖೆಯ ತಪಾಸಣಾ ಕೊಠಡಿ ಮೇಲೆ ಕಾಡಾನೆ ದಾಳಿ: ಸಿಬ್ಬಂದಿಗಳು ಬಾಗಿಲು ಮುಚ್ಚಿ ಪ್ರಾಣ ಉಳಿಸಿಕೊಂಡರು

admincoorgdaily

ಅರಣ್ಯ ಇಲಾಖೆಯ ತಪಾಸಣಾ ಕೊಠಡಿ ಮೇಲೆ ಕಾಡಾನೆ ದಾಳಿ:  ಸಿಬ್ಬಂದಿಗಳು ಬಾಗಿಲು ಮುಚ್ಚಿ ಪ್ರಾಣ ಉಳಿಸಿಕೊಂಡರು

ಗೋಣಿಕೊಪ್ಪ: ಕೊಡಗಿನ ಗಡಿ ಭಾಗವಾದ ಆನೆ ಚೌಕೂರು ಗೇಟ್ ನಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಕೊಠಡಿಗೆ ಕಾಡಾನೆ ದಾಳಿ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

 ಈ ಸಂದರ್ಭದಲ್ಲಿ ಕರ್ತವ್ಯ ನಿರತದಲ್ಲಿದ್ದ ಸಿಬ್ಬಂದಿಗಳು ಕೊಠಡಿಯ ಮುಂಭಾಗದ ಬಾಗಿಲು ಮುಚ್ಚಿ ಒಳಗೆ ಸೇರಿಕೊಂಡು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ತನ್ನ ಸಿಟ್ಟು ತೀರಿಸಿಕೊಂಡ ನಂತರ ಕಾಡಾನೆ ಅಲ್ಲಿಂದ ಮರೆಯಾಗಿದೆ. ಘಟನೆಯಿಂದ ಕೊಠಡಿಗೆ ಹಾನಿಯಾಗಿದೆ.