ಕೈಕಾಡು ಗ್ರಾಮದಲ್ಲಿ ಕಾಡಾನೆ ದಾಳಿ- ಆತಂಕದಲ್ಲಿ ಗ್ರಾಮಸ್ಥರು
ನಾಪೋಕ್ಲು: ಕೈಕಾಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ, ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಇಲ್ಲಿಗೆ ಸಮೀಪದ ಪಾರಾಣೆ ಗ್ರಾಮ ಪಂಚಾಯಿತಿಯ ಕೈಕಾಡು ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂದು ಕಳೆದ ನಾಲ್ಕು ದಿನಗಳಿಂದ ಗ್ರಾಮದ ತೋಟಗಳಿಗೆ ನುಗ್ಗು ಕಾಫಿ, ಬಾಳೆ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು ತುಳಿದು ಹಾನಿಗೊಳಪಡಿಸುತ್ತಿವೆ. ತೋಟಗಾರಿಕಾ ಬೆಳೆಗಳನ್ನು ಧ್ವಂಸಗೊಳಿಸಿ ಅಪಾರ ನಷ್ಟ ಉಂಟುಮಾಡುತ್ತಿದೆ ಇದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಗ್ರಾಮಸ್ಥರು ಹಾಗೂ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹಲವು ಬೆಳೆಗಾರರ ತೋಟಗಳಿಗೆ ನಿರಂತರವಾಗಿ ಕಾಡಾನೆಗಳು ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿರುವುದಾಗಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.ಈ ವ್ಯಾಪ್ತಿಯ ದೇವರಕಾಡಿಗೆ ನುಸುಳಿರುವ ಕಾಡಾನೆಗಳು ರಾತ್ರಿ ವೇಳೆ ದಾಂದಲೆ ನಡೆಸುತ್ತಿವೆ. ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾಫಿ ಹಾಗೂ ಅಡಿಕೆ ಸೇರಿದಂತೆ ಫಲ ನೀಡುವ ಗಿಡಗಳನ್ನು ತುಳಿದು ನಾಶಪಡಿಸಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೈಕಾಡು ಗ್ರಾಮದ ಬೆಳೆಗಾರ ಎನ್.ಕೆ.ಪ್ರಭು ಆರೋಪಿಸಿದ್ದಾರೆ.
ಇತ್ತ ಬೇತು ಗ್ರಾಮದ ಬೆಳೆಗಾರರೂ ಭಯಭೀತರಾಗಿದ್ದಾರೆ. ಬೇತು ಬಾಪೂಜಿ ಕಾಲೊನಿಯ ಮಂದಿ ರಾತ್ರಿಯಿಡೀ ಶಬ್ಧ ಮಾಡಿ ಆನೆಗಲು ದೂರ ತೆರಳುವಂತೆ ಮಾಡಿದ್ದಾರೆ. ಗುರುವಾರ ರಾತ್ರಿ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪ ಕಾಡಾನೆಗಳು ತೆರಳಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸ್ಪಂದಿಸಿ,ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯ ಕ್ಯಾಂಪ್ ಸಿಬ್ಬಂದಿಗಳು ಗುರುವಾರ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲವೆಂದು ನನ್ನಲಾಗಿದೆ.
ಅರಣ್ಯ ಪಾಲಕ ಅ೦ನಸೋ ಗುಡೆ , ಸಿಬ್ಬಂದಿಗಳಾದ ಸುರೇಶ್, ಬೋಪಣ್ಣ. ದೇವರ ಕಾಡಿನಲ್ಲಿ ಪಟಾಕಿ ಸಿಡಿಸಿ ಪರಿಶೀಲಿಸಿ ದಾಗ ಆನೆ ಇರುವುದು ಕಂಡುಬಂದಿಲ್ಲ ಬೇರೆ ಕಡೆಗೆ ತೆರಳಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು .
ಈ ಸಂದರ್ಭ ಗ್ರಾಮಸ್ಥರಾದ ಎನ್.ಕೆ.ಪ್ರಭು , ಬಿ.ಬಿ ವಿಠಲ್ , ನಾಯಕಂಡ ವಿನು ಬೋಪಣ್ಣ , ಎನ್ ಕೆ. ರಘುಪತಿ , ನಾಯಕಂಡ ಮಧು ಮುತ್ತಪ್ಪ , ನಾಯಕಂಡ ಬಿ ಗಣಪತಿ , ನಾರಾಯಣ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0
