Kodagu

ಹಾಡಿಯ ಮಹಿಳೆ ಮೇಲೆ ಕಾಡಾನೆ ದಾಳಿ

admincoorgdaily

ಹಾಡಿಯ ಮಹಿಳೆ ಮೇಲೆ ಕಾಡಾನೆ ದಾಳಿ

ಪೊನ್ನಂಪೇಟೆ:ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಕುಟ್ಟ ಸಮೀಪದ ಅಯ್ಯಪ್ಪ ದೇವರಕಾಡು ತೈಲ ವಿಲೇಜ್‌ ವ್ಯಾಪ್ತಿಯಲ್ಲಿ ನಡೆದಿದೆ. ನಾಣಚ್ಚಿ ಹಾಡಿಯ ಮಾರಕ್ಕ ಎಂಬ ಮಹಿಳೆಯ ಮೇಲೆ ಕಾಡಾನೆ ಎರಗಿ ಗಾಯಗೊಳಿಸಿದೆ. ಮಹಿಳೆಗೆ ಕುಟ್ಟ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಕೇರಳದ ಪೇಪಾಡಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.