Kodagu

ನಾಳೆ ವಿರಾಜಪೇಟೆ ತಾಲ್ಲೂಕಿನ ವಿವಿಧೆಡೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ

admincoorgdaily

ನಾಳೆ ವಿರಾಜಪೇಟೆ ತಾಲ್ಲೂಕಿನ ವಿವಿಧೆಡೆ ಕಾಡಾನೆ ಸೆರೆ ಹಿಡಿಯುವ  ಕಾರ್ಯಾಚರಣೆ

ವಿರಾಜಪೇಟೆ;ವಿಭಾಗದ ವಿರಾಜಪೇಟೆ ವಲಯದ ಅಮಾತಿ ಶಾಖೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ 3 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ವಲಯ ಅರಣ್ಯಾಧಿಕಾರಿ ಅವರು ಆಗಸ್ಟ್ 17 ರಂದು ಹೊರಡಿಸಿರುವ ಆದೇಶದ ಪ್ರಕಾರ, ಆಗಸ್ಟ್ 18 ರಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

ಕಾವಾಡಿ, ಹಚ್ಚಿನಾಡು, ಬೈರಂಬಾಡ, ಕಣ್ಣಂಗಾಲ, ಹಾಲುಗುಂದ, ಯಡೂರು, ಚಿಕ್ಕಹಳ್ಳಿ, ಗುಹ್ಯ, ಸಿದ್ದಾಪುರ, ಪುಲಿಯೇರಿ, ಅಮ್ಮತ್ತಿ ಹಾಗೂ ಕರಡಿಗೋಡು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಆನೆಗಳು ಉಪಟಳ ನೀಡುತ್ತಿವೆ. ಕಾರ್ಯಾಚರಣೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ಮತ್ತು ಅರಣ್ಯ ಇಲಾಖೆಗೆ ಸಹಕರಿಸುವಂತೆ ವಲಯ ಅರಣ್ಯಾಧಿಕಾರಿ ಕೋರಿದ್ದಾರೆ.