Kodagu

ಬೆಳ್ಳಂ ಬೆಳಿಗ್ಗೆ ಸ್ಕೂಲ್ ಬಾಣೆಯಲ್ಲಿ ಕಾಡಾನೆ ವಾಕಿಂಗ್: ಒಂಟಿ ಸಲಗದಿಂದ ಗ್ರಾಮಸ್ಥರಲ್ಲಿ ಆತಂಕ

admincoorgdaily

ಬೆಳ್ಳಂ ಬೆಳಿಗ್ಗೆ ಸ್ಕೂಲ್ ಬಾಣೆಯಲ್ಲಿ ಕಾಡಾನೆ ವಾಕಿಂಗ್: ಒಂಟಿ ಸಲಗದಿಂದ ಗ್ರಾಮಸ್ಥರಲ್ಲಿ ಆತಂಕ

ಸುಂಟಿಕೊಪ್ಪ: ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಸ್ಕೂಲ್ ಬಾಣೆಯಲ್ಲಿ ಇಂದು ಬೆಳಿಗ್ಗೆ ಒಂಟಿ ಸಲಗವೊಂದು ರಾಜಾರೋಷವಾಗಿ ಸಂಚರಿಸಿ ಸ್ಥಳೀಯರಲ್ಲಿ ಕೆಲ ಕಾಲ ಆತಂಕ ಮೂಡಿಸಿತು.

ಇಂದು ಬೆಳಿಗ್ಗೆ 6.30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಹಿಂಭಾಗದ ಮೋಟಂಡ ಕುಟ್ಟಪ್ಪ ಎಂಬುವವರ ತೋಟದಿಂದ ಹೊರಬಂದ ಕಾಡಾನೆ, ಸ್ಕೂಲ್ ಬಾಣೆ ಮುಖ್ಯ ರಸ್ತೆಗೆ ಬಂದಿದೆ. ದೇವಾಲಯದ ಬಳಿ ಒಮ್ಮೆ ಘೀಳಿಟ್ಟ ಸಲಗವನ್ನು ಕಂಡ ಸ್ಥಳೀಯರು ಆನೆ ಬಂದಿರುವ ಅಪಾಯದ ಮುನ್ಸೂಚನೆಯನ್ನು ಅರಿತು ಮನೆಯಿಂದ ಹೊರಗೆ ಬಾರದೆ ಜೀವ ಉಳಿಸಿಕೊಂಡರು.

 ಸ್ಕೂಲ್ ಬಾಣೆ ಮುಖ್ಯರಸ್ತೆಯ ಮೂಲಕ ಸಂಚರಿಸಿದ ಸಲಗವು ಗ್ರಾಮ ಪಂಚಾಯತ್ ಸಿಬ್ಬಂದಿ ಧನಂಜಯರ ಮನೆ ಬಳಿಯಿಂದ ಹಾದು, ಪಕ್ಕದ ತೋಟದೊಳಗೆ ನುಸುಳಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇಳಿಯದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಆನೆ ಸಂಚಾರದ ವೇಳೆ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಘಟನೆಯ ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.