ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.10ರಂದು ಗೆಲುವು ಸಾಧಿಸಿದ ತಂಡಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.10ರಂದು ಗೆಲುವು ಸಾಧಿಸಿದ ತಂಡಗಳು

ಮಡಿಕೇರಿ ಏ.10 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.10 ರಂದು ಗೆಲುವು ಸಾಧಿಸಿದ ತಂಡಗಳು.

ಮೈದಾನ 1;

ಆಚೆಯಡ ಮತ್ತು ಕರಿನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ 42 ರನ್ ಗಳಿಂದ ಜಯ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರಿನೆರವಂಡ ತಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಗಳನ್ನು ಗಳಿಸಿತು. ಆಚೆಯಡ 6 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 77 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.

ಕಾಟಿಮಾಡ ಮತ್ತು ಬೊಳ್ಳೆಪಂಡ ನಡುವಿನ ಹಣಾಹಣಿಯಲ್ಲಿ ಬೊಳ್ಳೆಪಂಡ ತಂಡ 6 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾಟಿಮಾಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 89 ರನ್ ಗಳನ್ನು ಸೇರಿಸಿತು. ಬೊಳ್ಳೆಪಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 90 ರನ್ ಗಳನ್ನು ಗಳಿಸಿ ಗೆಲುವಿನ ನಗು ಬೀರಿತು. 

ಐಚಂಡ(ದೇವಣಗೇರಿ) ಮತ್ತು ಅಣ್ಣಳಮಾಡ (ಬಿರುನಾಣಿ) ತಂಡಗಳ ನಡುವಿನ ಪಂದ್ಯದಲ್ಲಿ ಐಚಂಡ 8 ರನ್ ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಣ್ಣಳಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 59 ರನ್ ಗಳನ್ನು ಗಳಿಸಿತು. ಐಚಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 67 ರನ್ ಗಳನ್ನು ಸೇರಿಸಿ ಪಂದ್ಯವನ್ನು ಗೆದ್ದುಕೊಂಡಿತು.  

ಬೊಪ್ಪಡ್ತಂಡ ಮತ್ತು ಕೋಳೆರ ತಂಡಗಳ ನಡುವಿನ ಪಂದ್ಯದಲ್ಲಿ ಕೋಳೆರ 10 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೊಪ್ಪಡ್ತಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿತು. ಕೋಳೆರ ಯಾವುದೇ ವಿಕೆಟ್ ನಷ್ಟವಿಲ್ಲದೆ 6 ಓವರ್ ಗಳಲ್ಲಿ 55 ರನ್ ಗಳನ್ನು ಗಳಿಸಿ ಜಯ ದಾಖಲಿಸಿತು. 

ಮೈದಾನ 2;

ಗೌಡಂಡ (ಸೂರ್ಲಬ್ಬಿ) ಮತ್ತು ಕೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ಟಂಗಡಕ್ಕೆ ಭರ್ಜರಿ 76 ರನ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಟ್ಟಂಗಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 100 ರನ್ ಗಳನ್ನು ಸೇರಿಸಿತು. ಗೌಡಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 24 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. 

ಕೊಟ್ರಮಾಡ ಮತ್ತು ಬುಟ್ಟಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ರಮಾಡ 5 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬುಟ್ಟಿಯಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಗಳಿಸಿತು. ಕೊಟ್ರಮಾಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಸೇರಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಬೊಟ್ಟೋಳಂಡ ಮತ್ತು ಕುಂಜಿಯಂಡ ನಡುವಿನ ಪಂದ್ಯದಲ್ಲಿ ಕುಂಜಿಯಂಡ 14 ರನ್ ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕುಂಜಿಯಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 93 ರನ್ ಗಳನ್ನು ಗಳಿಸಿತು. ಬೊಟ್ಟೋಳಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 6 ಓವರ್ ಗಳಲ್ಲಿ 79 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.

ಕೋಣಿಯಂಡ ಮತ್ತು ನಾಗಂಡ ನಡುವಿನ ಪಂದ್ಯದಲ್ಲಿ ಕೋಣಿಯಂಡ 31 ರನ್ ಗಳ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಣಿಯಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 84 ರನ್ ಗಳನ್ನು ಸೇರಿಸಿತು. ನಾಗಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಗಳಿಸಿ ಸೋಲು ಕಂಡಿತು.