ಚಳಿಗಾಲದ ಪರಿಣಾಮ: ಸಾವಿರ ರೂಪಾಯಿ ಗಡಿಯತ್ತ ಮಟನ್ ದರ; ನಾನ್‌ವೆಜ್ ಪ್ರಿಯರಿಗೆ ಬೆಲೆ ಶಾಕ್

Dec 21, 2025 - 14:30
 0  957
ಚಳಿಗಾಲದ ಪರಿಣಾಮ: ಸಾವಿರ ರೂಪಾಯಿ ಗಡಿಯತ್ತ ಮಟನ್ ದರ; ನಾನ್‌ವೆಜ್ ಪ್ರಿಯರಿಗೆ ಬೆಲೆ ಶಾಕ್
ಮಟನ್ (ಸಂಗ್ರಹ ಚಿತ್ರ)

ಬೆಂಗಳೂರು, ಡಿ. 21: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚಳಿ ಮತ್ತು ಶೀತಗಾಳಿ ಹೆಚ್ಚಾಗಿದ್ದು, ಅದರ ಪರಿಣಾಮ ಮಾಂಸಾಹಾರ ಮಾರುಕಟ್ಟೆಯಲ್ಲೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಮಾಂಸಾಹಾರಕ್ಕೆ ಹೆಚ್ಚು ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಮಟನ್ ಹಾಗೂ ಚಿಕನ್‌ ಗೆ ಬೇಡಿಕೆ ಹೆಚ್ಚಿದ್ದು, ದರಗಳು ಗಗನಕ್ಕೇರಿವೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಬ್ಬದ ಸೀಸನ್ ಆರಂಭವಾಗಿರುವುದರಿಂದ ಮಟನ್, ಚಿಕನ್ ಮತ್ತು ಮೊಟ್ಟೆಗಳ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಹವಾಮಾನ ವೈಪರಿತ್ಯದಿಂದ ಕುರಿ ಹಾಗೂ ಕೋಳಿ ಉತ್ಪಾದನೆ ಕುಸಿತ ಕಂಡಿರುವುದರಿಂದ ಪೂರೈಕೆ ಕೊರತೆ ಉಂಟಾಗಿದೆ. ಇದರಿಂದಾಗಿ ಮಾಂಸದ ದರಗಳಲ್ಲಿ ತೀವ್ರ ಏರಿಕೆ ದಾಖಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಕೆಜಿಗೆ 900 ರೂಪಾಯಿ ಮಟ್ಟದಲ್ಲಿರುವ ಮಟನ್ ದರ, ಮುಂದಿನ ವಾರಗಳಲ್ಲಿ ಸಾವಿರ ರೂಪಾಯಿ ಗಡಿ ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಚಳಿಗಾಲದಲ್ಲಿ ಕುರಿಗಳ ಬೆಳವಣಿಗೆ ಕುಸಿತ, ಸಾಗಾಣಿಕೆ ವೆಚ್ಚದ ಹೆಚ್ಚಳ ಹಾಗೂ ಪೂರೈಕೆಯ ಅಡಚಣೆಗಳು ಮಟನ್ ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. 

ಇನ್ನು ಸಾಮಾನ್ಯವಾಗಿ ಕೆಜಿಗೆ 230 ರಿಂದ 240 ರೂಪಾಯಿ ಮಟ್ಟದಲ್ಲಿದ್ದ ಚಿಕನ್ ದರ ಇದೀಗ 300 ರಿಂದ 310 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಚಿಕನ್ ಹಾಗೂ ಮಟನ್ ಎರಡೂ ದರಗಳಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0