ನವಜಾತ ಶಿಶುವನ್ನು ರಸ್ತೆ ಮೇಲೆ ಬಿಟ್ಟ ಮಹಿಳೆಗೆ ಜೈಲು ಶಿಕ್ಷೆ
ಬಾಗಲಕೋಟೆ, ಜ.14: ನವಜಾತ ಶಿಶುವನ್ನು ಪಾಲನೆ ಮಾಡದೆ ರಸ್ತೆ ಮೇಲೆ ಬಿಟ್ಟುಹೋದ ಮಹಿಳೆಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಬಾಗಲಕೋಟೆಯ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಸಿದ್ದವ್ವ ಹನುಮಂತ ಸಂಗೊಳ್ಳಿ ಎಂಬ ಮಹಿಳೆಯನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ಈ ಸಂಬಂಧ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಪತಿ ಮೃತಪಟ್ಟ ಬಳಿಕ ಅನೈತಿಕ ಸಂಬಂಧದಿಂದ ಗರ್ಭಿಣಿಯಾಗಿದ್ದ ಮಹಿಳೆ, 2023ರ ಆಗಸ್ಟ್ 6ರಂದು ಜನಿಸಿದ ಗಂಡು ಶಿಶುವನ್ನು ಬಾಗಲಕೋಟೆ ತಾಲೂಕಿನ ಬೆನಕಟ್ಟಿ–ಕಮತಗಿ ರಸ್ತೆಯಲ್ಲಿ ಬಿಟ್ಟುಹೋಗಿದ್ದಳು. ಶಿಶು ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.
ಸಾಕ್ಷ್ಯಾಧಾರಗಳು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0
