ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮಹಿಳೆಗೆ 54 ವರ್ಷಗಳ ಜೈಲು!

Nov 12, 2025 - 10:21
 0  2.9k
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮಹಿಳೆಗೆ 54 ವರ್ಷಗಳ ಜೈಲು!
Photo credit:Vijayavani (ಸಾಂದರ್ಭಿಕ ಚಿತ್ರ)

ಚೆನ್ನೈ, ನ.12: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ತಮಿಳುನಾಡಿನ ತಿರುಚಿರಾಪಳ್ಳಿ ವಿಶೇಷ ನ್ಯಾಯಾಲಯವು 38 ವರ್ಷದ ಮಹಿಳೆಗೆ 54 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತ ಬಾಲಕನಿಗೆ ₹6 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ

ಘಟನೆ 2021ರಲ್ಲಿ ನಡೆದಿದ್ದು, ತಿರುವರೂರು ಜಿಲ್ಲೆಯ ಎಲವಾಂಚೇರಿ ಗ್ರಾಮದ ನಿವಾಸಿ ಲಲಿತಾ ಎಂಬವರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ ಆಕೆ, ಸ್ಥಳೀಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಂದಿಗೆ ಆಪ್ತ ಸಂಪರ್ಕ ಬೆಳೆಸಿಕೊಂಡಿದ್ದರು. ಈ ವಿಚಾರ ಗೊತ್ತಾದ ಹುಡುಗನ ಕುಟುಂಬ ಅವನನ್ನು ಸಂಬಂಧಿಕರ ಮನೆಗೆ ಕಳುಹಿಸಿತ್ತು.

ಆದರೆ ಕೆಲ ದಿನಗಳಲ್ಲಿ ಹುಡುಗ ಕಾಣೆಯಾಗಿದ್ದರಿಂದ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದರು. ತನಿಖೆ ವೇಳೆ ಲಲಿತಾ ಹಾಗೂ ಹುಡುಗ ವೇಲಾಂಕಣಿಯಲ್ಲಿ ಪತ್ತೆಯಾಗಿದ್ದು, ಲಲಿತಾ ಹುಡುಗನನ್ನು ಅಪಹರಿಸಿ ಊಟಿಯೊಂದರ ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂಬುದು ಬಹಿರಂಗವಾಯಿತು.

ಪ್ರಕರಣ ವಿಚಾರಣೆ ನಡೆಸಿದ ತಿರುಚಿರಾಪಳ್ಳಿ ವಿಶೇಷ ನ್ಯಾಯಾಲಯವು, ಪೋಕ್ಸೋ ಕಾಯ್ದೆಯಡಿ ಎರಡು ಸೆಕ್ಷನ್‌ಗಳ ಅಡಿಯಲ್ಲಿ ತಲಾ 20 ವರ್ಷಗಳ ಶಿಕ್ಷೆ, ಹಾಗೂ ಅಪಹರಣ ಸೇರಿದಂತೆ ಇತರೆ ಅಪರಾಧಗಳ ಅಡಿಯಲ್ಲಿ 14 ವರ್ಷಗಳ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಗಳು ಕ್ರಮವಾಗಿ ಅನ್ವಯವಾಗುವುದರಿಂದ ಒಟ್ಟು 54 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 2
Love Love 1
Funny Funny 5
Angry Angry 0
Sad Sad 3
Wow Wow 1