ದುಂಡಳ್ಳಿ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ

Apr 25, 2026 - 02:20
 0  81
ದುಂಡಳ್ಳಿ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ

ಶನಿವಾರಸಂತೆ:ಏ24:-ಸಮೀಪದ ದುಂಡಳ್ಳಿ ಗ್ರಾ.ಪಂಚಾಯಿತಿಯ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನ ವನ್ನು ಆಚರಿಸಲಾಯಿತು. ಪ್ರತಿ ವರ್ಷ ಏಪ್ರಿಲ್23 ರ ದಿನವನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುತ್ತಾರೆ ಈ ಹಿನ್ನಲೆಯಲ್ಲಿ ದುಂಡಳ್ಳಿ ಡಿಜಿಟಲ್ ಗ್ರಂಥಾಲಯದಲ್ಲೂ ಆಚರಿಸಲಾಯಿತು. 

ದಿನದ ಮಹತ್ವ ಕುರಿತು ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯ ಮಾತನಾಡಿ,ಪುಸ್ತಕವು ಜ್ಞಾನದ ಕಣಜವಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಮೂಲಕ ಜ್ಞಾನದ ಸಂಪಾದನೆ ಮಾಡಬೇಕು. ತಾನು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಜೊತೆಯಲ್ಲಿ ತಮ್ಮ ಸ್ನೇಹಿತರಿಗೂ ಪುಸ್ತಕವನ್ನು ಓದುವಂತೆ ಪ್ರೇರಿಪಿಸಬೇಕೆಂದರು. ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಾಸನಗೊಳ್ಳಲು ಪುಸ್ತಕ ಮಹತ್ವದ ಪಾತ್ರವಹಿಸುತ್ತದೆ, ಸಂಸ್ಕಾರ, ನಡೆನುಡಿ ಸೇರಿದಂತೆ ಆಧುನಿಕ ಮತ್ತು ವೈಜ್ಞಾನಿಕ ವಿಚಾರಗಳ ಬಗ್ಗೆಯೂ ತಿಳಿದುಕೊಳ್ಳಬಹುದು ಜೀವನ ನಡೆಸಲು ಮತ್ತು ಸಾಧನೆ ಮಾಡಲು ಸಹ ಪುಸ್ತಕಗಳು ಸಹಕಾರಿಯಾಗುತ್ತದೆ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಪುಸ್ತಕದ ಪ್ರೇಮಿಯಾಗಿ ತನ್ನ ಜ್ಞಾನವನ್ನು ವೃದ್ದಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯದ ಓದುಗರು, ವಿದ್ಯಾರ್ಥಿಗಳು, ಯುವಕ ಯುವತಿಯರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0