Kodagu

ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ಕೊಡಗಿನ ವಿದ್ಯಾರ್ಥಿಗಳು

admincoorgdaily

ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ಕೊಡಗಿನ ವಿದ್ಯಾರ್ಥಿಗಳು

ಮಡಿಕೇರಿ ಆ.1 : ನೇಪಾಳದ ಕಾಟ್ಮಂಡ್ ನಲ್ಲಿ ನಡೆದ 3ನೇ ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಪದಕ ಗೆದ್ದುಕೊಂಡಿದ್ದಾರೆ.

ಕೌಶಿಕ್ ಕುಮಾರ್ ಯು.ಸಿ., ಮಹಮ್ಮದ್ ಯಾಸಿನ್, ಮಹಮ್ಮದ್ ಹಫೀಸ್ ಚಿನ್ನದ ಪದಕವನ್ನು, ಅಜಯ್ ಎನ್.ಎಸ್., ಮನ್ವಿತ್ ಮೋಹನ್ ಎಂ., ಶ್ರಿಯಾನ್ ಗೌಡ ಡಿ.ಹೆಚ್., ಮಿತೇಶ್ ಜೆ. ಹಾಗೂ ರಿತನ್ ಡಿ.ಎಸ್ ಬೆಳ್ಳಿ ಪದಕವನ್ನು ಹಾಗೂ ಸಾತ್ವಿಕ ಬಿ.ಎಸ್. ಕಂಚಿನ ಪದಕ ಗೆದ್ದುಕೊಂಡರು.

ಭಾರತ ತಂಡದಲ್ಲಿ ಕರ್ನಾಟಕ ರಾಜ್ಯದ 21 ಕ್ರೀಡಾಪಟುಗಳು ಭಾಗವಹಿಸಿ, 10 ಚಿನ್ನದ ಪದಕ, 8 ಬೆಳ್ಳಿ ಪದಕ ಹಾಗೂ 3 ಕಂಚಿನ ಪದಕ ಪಡೆದುಕೊಂಡರು. ಕೊಡಗು ಜಿಲ್ಲೆಯ 9 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತುದಾರ ಎನ್.ಸಿ.ಸುದರ್ಶನ್ ಅವರು ತರಬೇತಿಯನ್ನು ನೀಡಿದರು.