ಆ.19 ರಂದು ವಿರಾಜಪೇಟೆಯಲ್ಲಿ ವಿಶ್ವಛಾಯಾಗ್ರಹಣ ದಿನಾಚರಣೆ
admincoorgdaily

ವಿರಾಜಪೇಟೆ: ಕೊಡಗು ಪತ್ರಕತ೯ರ ಸಂಘ ಮತ್ತು ವೀರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ವತಿಯಿಂದ ವೀರಾಜಪೇಟೆಯ ಸೆಂಟ್ ಅ್ಯಂನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ಸಹಯೋಗದಲ್ಲಿ ಆಗಸ್ಟ್ 19 ರಂದು ಬುಧವಾರ ಸಂತ ಅನ್ನಮ್ಮ ಪದವಿ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ವಿಶ್ವಛಾಯಾಗ್ರಹಣ ದಿನಾಚರಣೆ ಆಯೋಜಿಸಲಾಗಿದೆ.
ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಮದೋಷ್ ಪೂವಯ್ಯ ಅಧ್ಯಕ್ಷತೆಯ ಕಾಯ೯ಕ್ರಮವನ್ನು ಹೆಸರಾಂತ ಪಕ್ಷಿ ಛಾಯಾಾಗ್ರಾಹಕ ಡಾ.ಎಸ್. ವಿ.ನರಸಿಂಹನ್ ಉದ್ಗಾಟಸಲಿದ್ದು, ದೇವನಹಳ್ಳಿಯ ಸಮಾಜಸೇವಕ ಮಂಡಿಬೆಲೆ ರಾಜಣ್ಣ, ವೀರಾಜಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ.ಅಬ್ದ್‌ಲ್ ಸಲಾಂ, ಮಾಜಿ ಯೋಧ ಎನ್.ಕೆ. ಸಲಾಂ, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲ್ ಮುತ್ತು, ಕಾಲೇಜಿನ ಪ್ರಾಂಶುಪಾಲರಾದ ತೖಪ್ತಿ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.
ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ವಿಶ್ವ ಗುಡ್ಡೆ ಮನೆ ಮತ್ತು ಮುಕ್ಕಾಟೀರ ಡೀನಾಪೂವಣ್ಣ ಅವರಿಂದ ಛಾಯಾಚಿತ್ರ ಪ್ರದಶ೯ನ ಆಯೋಜಿಸಲಾಗಿದೆ ಎಂದು ವಿರಾಜಪೇಟೆ ತಾಲೂಕು ಸಂಘದ ಕಾಯ೯ದಶಿ೯ ಉಷಾಪ್ರೀತಮ್ ತಿಳಿಸಿದ್ದಾರೆ.