ಹೆಬ್ಬಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: ಮಕ್ಕಳಿಗೆ ಯೋಗಾಸನ ತರಬೇತಿ

Jun 21, 2026 - 20:05
 0  235
ಹೆಬ್ಬಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: ಮಕ್ಕಳಿಗೆ ಯೋಗಾಸನ ತರಬೇತಿ

ಕುಶಾಲನಗರ, ಜೂ.21: ಕುಶಾಲನಗರ ಸಮೀಪ ಹೆಬ್ಬಾಲೆಯ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 'ಅಂತರರಾಷ್ಟ್ರೀಯ ಯೋಗ ದಿನ' ಆಚರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್‌ನ ನಿವೃತ್ತ ಉಪನ್ಯಾಸಕ ಕೆ.ವಿ. ಉದಯ ಭಾಗವಹಿಸಿ ಮಕ್ಕಳಿಗೆ ಯೋಗ ದಿನದ ಮಹತ್ವ ತಿಳಿಸಿದರು. ಯೋಗಾಸನದ ವಿವಿಧ ಭಂಗಿಗಳ ಬಗ್ಗೆ ವಿವರಿಸಿದರು.

 ಕಾರ್ಯಕ್ರಮದಲ್ಲಿ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಸೇಕ್ರೆಡ್ ಹಾರ್ಟ್ ಶಾಲೆಯ ವ್ಯವಸ್ಥಾಪಕ ಎಚ್.ಎಸ್. ಲೋಕೇಶ್, ಮುಖ್ಯ ಶಿಕ್ಷಕಿ ಲೇಖಾ ಜಾನ್, ಸಹ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು. ಶಾಲೆಯ ಹಿರಿಯ ಶಿಕ್ಷಕಿ ಶೈಲಾ ಮಕ್ಕಳಿಗೆ ವಿವಿಧ ಭಂಗಿಯ ಆಸನಗಳನ್ನು ಹೇಳಿಕೊಟ್ಟರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಕೆ.ವಿ. ಉದಯ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0