ಕುಶಾಲನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದಾರೆ ಯಮದೂತರು

Jul 1, 2026 - 10:57
 0  2.2k
ಕುಶಾಲನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ  ಓಡಾಡುತ್ತಿದ್ದಾರೆ ಯಮದೂತರು

ಕುಶಾಲನಗರ ಜೂ.10: ಹಿಂದೂಗಳ ನಂಬಿಕೆಯ ಪ್ರಕಾರ ನರಕದಲ್ಲಿ ಯಮದೂತರಿರುತ್ತಾರೆ ಆದರೆ ಕುಶಾಲನಗರದಲ್ಲಿ ದ್ವಿಚಕ್ರ ವಾಹನ ಸವಾರರ ವೇಷದಲ್ಲಿ ಯಮದೂತರಿದ್ದಾರೆ! ಎಚ್ಚರ ವೃದ್ಧರೆ, ಮಹಿಳೆಯರೇ ಮತ್ತು ಮಕ್ಕಳೆ. ದ್ವಿಚಕ್ರವಾಹನದ ನಂಬರ್ ಪ್ಲೇಟ್ಗೆ ಮಾಸ್ಕ್ ಮುಚ್ಚಿಕೊಂಡು, ಮುಖಕ್ಕೂ ಹಾಕಿಕೊಂಡು, ನಂಬರ್ ಪ್ಲೇಟ್ ರಹಿತ ಬೈಕುಗಳಲ್ಲಿ ಕೆಲವು ಯುವಕರು ಬಹುಶಃ ಯಾವುದೋ ಅಮಲಿನಲ್ಲಿ, ಸುಮಾರು 100-120 ಕಿ.ಮೀ. ವೇಗದಲ್ಲಿ , ಕರ್ಕಶ ಶಬ್ದದೊಂದಿಗೆ ಪಟಾಕಿ ಸದ್ದು ಬರುವ ರೀತಿಯಲ್ಲಿ ಸೈಲೆನ್ಸರ್ ಮಾರ್ಪಾಡು ಮಾಡಿಸಿಕೊಂಡು ನಗರದ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.

ರಾತ್ರಿಯ ವೇಳೆಯಲ್ಲಿ ಹೆಚ್ಚಾಗಿ ಸಂಚರಿಸುತ್ತಾರೆ ಈ ಗಂಡಾಂತರಿಗಳು ಎಂದು ನಿವಾಸಿಗಳು ತಿಳಿಸಿದ್ದಾರೆ. ಬಹುಶಃ , ಖಾಕಿ, ಕಾನೂನು , ಕ್ಯಾಮರಾ ಯಾವುದರ ಭಯವಿಲ್ಲದೆ ಸಂಚರಿಸುತ್ತಿರುವ ಹಾಗೂ ವಾಹನಗಳ ಸೈಲೆನ್ಸರ್ ಮಾರ್ಪಾಡು ಮಾಡಿಕೊಡುತ್ತಿರುವವರನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಬೇಕೆಂದು ಭಯಬೀತರಾಗಿರುವ ನಾಗರಿಕರು ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.

ಇನ್ನಾದರೂ, ಆಯಕಟ್ಟಿನ ರಸ್ತೆಗಳಲ್ಲಿ ಹೊಸದಾಗಿ ಅಳವಡಿಸಿರುವ ಗರಿಷ್ಠ ಪ್ರಚಾರ ಗಿಟ್ಟಿಸಿಕೊಂಡ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳ ಸಹಾಯದಿಂದ ಈ ಯಮದೂತರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕೆಂದು ಪಾದಚಾರಿಗಳು, ವಾಹನ ಚಾಲಕರು ಸಂಬಂಧಿಸಿದವರಿಗೆ ವಿನಂತಿಸಿದ್ದಾರೆ. 

ವರದಿ: ಶ್ರೀಧರ್ ನಾರಾಯಣ್

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 2
Sad Sad 5
Wow Wow 0