ಸಿಗರೇಟಿನೊಳಗೆ ಡ್ರಗ್ಸ್ ತುಂಬಿಸಿ ಸೇದಿರುವ ಯುವಕ ಅರೆಸ್ಟ್

Aug 14, 2025 - 00:18
Aug 14, 2025 - 00:19
 0  700
ಸಿಗರೇಟಿನೊಳಗೆ ಡ್ರಗ್ಸ್ ತುಂಬಿಸಿ ಸೇದಿರುವ ಯುವಕ ಅರೆಸ್ಟ್

ಮಂಗಳೂರು:, ಡ್ರಗ್ಸ್ ಸೇವನೆ ಮಾಡಿದ್ದ ಆರೋಪದಲ್ಲಿ ಯುವಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಉರ್ವ ಪೊಲೀಸರು ಕೋಡಿಕಲ್ ಕಟ್ಟೆಯ ಬಳಿ ಮಂಗಳವಾರ ಬಂಧಿಸಿದ್ದಾರೆ. ಕೋಡಿಕಲ್‌ನ ಧನುಷ್ ಕುಮಾರ್ (23) ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿಯು ಕೋಡಿಕಲ್ ಕಟ್ಟೆಯ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತಾ ನಿಂತಿದ್ದ. ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಿಗರೇಟಿನೊಳಗೆ ಡ್ರಗ್ಸ್ ತುಂಬಿಸಿ ಸೇದಿರುವುದನ್ನು ಒಪ್ಪಿಕೊಂಡಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ಉರ್ವ ಠಾಣೆಯ ಎಸ್.ಐ ಗುರುವಪ್ಪ ಕಂಠಿ ತಿಳಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 2
Funny Funny 2
Angry Angry 0
Sad Sad 2
Wow Wow 1