ಮಿಸ್ ಯು ಚಿನ್ನಾ’ ಎಂದು ಪೋಸ್ಟ್ ಮಾಡಿ ಯುವಕ ನೇಣಿಗೆ ಶರಣು; ಪ್ರೇಮ ವೈಫಲ್ಯ ಶಂಕೆ

Oct 10, 2025 - 20:50
 0  3.1k
ಮಿಸ್ ಯು ಚಿನ್ನಾ’ ಎಂದು ಪೋಸ್ಟ್ ಮಾಡಿ ಯುವಕ ನೇಣಿಗೆ ಶರಣು; ಪ್ರೇಮ ವೈಫಲ್ಯ ಶಂಕೆ

‘ ಚಿಕ್ಕಬಳ್ಳಾಪುರ, ಅಕ್ಟೋಬರ್ 10: ಪ್ರೇಮ ವೈಫಲ್ಯದಿಂದ ಖಿನ್ನಗೊಂಡು 18 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಾಲಕುಂಟಹಳ್ಳಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಬಾಲಕುಂಟಹಳ್ಳಿಯ ಚಿರುತ್ ಕುಮಾರ್ (18) ಎಂದು ಗುರುತಿಸಲಾಗಿದೆ. ಅಪ್ರಾಪ್ತೆಯೊಂದಿಗಿನ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದ ಚಿರುತ್ ಇತ್ತೀಚಿನ ದಿನಗಳಲ್ಲಿ ಆ ಸಂಬಂಧದಲ್ಲಿ ಉಂಟಾದ ಅಸಮಾಧಾನದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 ಘಟನೆಯ ಮುನ್ನ ಚಿರುತ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಮಿಸ್ ಯು ಚಿನ್ನಾ” ಎಂದು ಬರೆದು, ಆ ಹುಡುಗಿಯೊಂದಿಗೆ ತೆಗೆಸಿಕೊಂಡ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಚಿರುತ್ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡುವ ಸುಳಿವು ನೀಡಿದ್ದರು.ಆಗ ಸ್ನೇಹಿತರು ಮತ್ತು ಕುಟುಂಬಸ್ಥರು ಅವನನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಈ ಬಾರಿ ಆತ ನಿಜವಾಗಿಯೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 4
Dislike Dislike 1
Love Love 1
Funny Funny 2
Angry Angry 3
Sad Sad 11
Wow Wow 1