ಯುವನಿಧಿ ಯೋಜನೆ : ಫಲಾನುಭವಿಗಳ ಗಮನಕ್ಕೆ
ಮಡಿಕೇರಿ ಜು.21:-ಯುವನಿಧಿ ಯೋಜನೆಗೆ ಈಗಾಗಲೇ ಹೆಸರು ನೋಂದಾಯಿಸಿಕೊಂಡು ಹಣ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಸ್ವಯಂ ಘೋಷಣೆಯನ್ನು ಪ್ರತಿ ತ್ರೈಮಾಸಿಕದ ಬದಲಾಗಿ ಮಾಸಿಕವಾಗಿ ಜುಲೈ 2026 ರ ತಿಂಗಳಿಂದ ಪ್ರತಿ ತಿಂಗಳಿನ 1 ರಿಂದ 25 ರೊಳಗೆ ಸ್ವಯಂ ಘೋಷಣೆಯನ್ನು ಸೇವಾ ಸಿಂಧು ಜಾಲತಾಣ https://sevasindhuservices.karnataka.gov.in ಸಲ್ಲಿಸುವುದು ಕಡ್ಡಾಯವೆಂದು ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ Helpline Number: 1800 599 7154 ಗೆ ಕರೆ ಮಾಡುವ ಮೂಲಕ ಅಥಾವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಈ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
