Kodagu

12 ವರ್ಷಗಳ ಬಳಿಕ ಕೊಡಗು ಜಿಲ್ಲಾ ಯುವ ಒಕ್ಕೂಟಕ್ಕೆ ಮರಳಿದ ಯುವ ಭವನ

admincoorgdaily

ಮಡಿಕೇರಿ: ಕಳೆದ 12 ವರ್ಷಗಳಿಂದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮೀಸಲಾಗಿದ್ದ ರಾಜ್ಯದ ಮೊದಲ ಯುವ ಭವನ ಕೊಡಗು ಜಿಲ್ಲಾ ಯುವ ಭವನ ಇದೀಗ ಜಿಲ್ಲಾ ಯುವ ಒಕ್ಕೂಟ ಕ್ಕೆ ಮರಳಿ ದೊರಕಿದೆ. ಹಿಂದಿನ ಸಾಲಿನಮಂಜೂರಾಗಿದ್ದ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಜಿಲ್ಲೆಯ ಮೊದಲ ಮಹಿಳಾ ಕಾಲೇಜಿಗೆ ಸೂಕ್ತ ಕಟ್ಟಡ ಇಲ್ಲದ ಕಾರಣ ಸುದರ್ಶನ ವೃತದಲ್ಲಿ ನಿರ್ಮಾಣಗೊಂಡಿದ್ದ ಜಿಲ್ಲಾ ಯುವ ಒಕ್ಕೂಟದ ಜಿಲ್ಲಾ ಯುವ ಭವನದಲ್ಲಿ 6 ತಿಂಗಳ ಮಟ್ಟಿಗೆ ಪ್ರಾರಂಭ ಮಾಡಲಾಯಿತು.

ಬಳಿಕ ಸ್ಥಳೀಯ ಜೂನಿಯರ್ ಕಾಲೇಜು ಆವರಣದಲ್ಲಿ ಅಂದಿನ ಸರ್ಕಾರ ದಿಂದ ಮಂಜೂರುಗೊಂಡಿದ್ದ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿತ್ತು . ಇದೀಗ ಪ್ರಸಕ್ತ ಸಾಲಿನ ಶಾಸಕರ ಪ್ರಯತ್ನ ಫಲವಾಗಿ 12 ವರ್ಷ ಬಳಿಕ ಹಾಲಿ ಶಾಸಕರು ಜಿಲ್ಲಾ ಯುವ ಒಕ್ಕೂಟಕ್ಕೆ ನೀಡಿದ ಭರವಸೆಯಂತೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಹಿಳಾ ಕಾಲೇಜು ಸ್ಟಳಾಂತರ ಮಾಡಿ ನಿಗದಿತ ಸಮಯ ದೊಳಗೆ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಿದರು. ಇದೀಗ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಕುಮಾರಿ ನಿರ್ಮಲ ಅವರು ಯುವ ಭವನದ ಕೀ ಗೊಂಚಲನ್ನು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ಸುಕುಮಾರ ಪಿ.ಪಿ ಅವರಿಗೆ ಹಸ್ತಾಂತರಿಸಿದರು.

 ಸದ್ಯದಲ್ಲಿಯೇ ಯುವ ಭವನ ದುರಸ್ಥಿ ಗೆ ಶಾಸಕರ ಅನುದಾನದಲ್ಲಿ ದುರಸ್ಥಿ ಮಾಡಿ ಕೊಡುವುದಾಗಿ ಶಾಸಕರು ಜಿಲ್ಲಾ ಯುವ ಒಕ್ಕೂಟ ಪದಾಧಿಕಾರಿಗಳಿಗೆ ಶಾಸಕರಾದ ಡಾ ಮಂತರ್ ಗೌಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಯುವ ಒಕ್ಕೂಟದ ಕಾರ್ಯ ಅಧ್ಯಕ್ಷರಾದ ಕೂಡಂಡ ಸಭಾ ಸುಬ್ರಮಣಿ,ಖಜಾಂಚಿ ಕುಂಜಿಲನ ಮದು ಮೋಹನ್,ಸದಸ್ಯ ಡಿ ನವೀನ್ ದೇರಳ,ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷರಾದ,ಬಾಳಾಡಿ ದಿಲೀಪ್ ಕುಮಾರ್ ಕಾಲೇಜು ಪ್ರಾಧ್ಯಾಪಕ ವೃಂದ ಹಾಜರಿದ್ದರು.