ಉದ್ಗಮ್ ಶಾಲೆಯಲ್ಲಿ ವಲಯ ಮಟ್ಟದ ಫುಟ್ಬಾಲ್ ಕ್ರೀಡಾಕೂಟ
ಕುಶಾಲನಗರ ಜು.2: ಕುಶಾಲನಗರ ಸಮೀಪದ ಗುಡ್ಡೆಹೊಸೂರಿನಲ್ಲಿರುವ ಉದ್ಗಮ್ ಶಾಲೆಯಲ್ಲಿ ಸಿ.ಐ.ಎಸ್.ಸಿ.ಇ ಶಾಲೆಗಳ ವಲಯ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟವು ಜೂನ್ 29 ,30ರಂದು ಯಶಸ್ವಿಯಾಗಿ ನಡೆಯಿತು. ಕೊಡಗು, ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರಗಳಿಂದ ಸುಮಾರು 23 ತಂಡಗಳು ಭಾಗವಹಿಸಿದ್ದವು.
14 ವರ್ಷ ವಯೋಮಿತಿಯ ವಿದ್ಯಾರ್ಥಿಗಳ ಪಂದ್ಯಾಟದಲ್ಲಿ ಕೂರ್ಗ್ ಪಬ್ಲಿಕ್ ಸ್ಕೂಲ್, ಗೋಣಿಕೊಪ್ಪ ಪ್ರಥಮ , ಉದ್ಗಮ್ ಶಾಲೆ ದ್ವಿತೀಯ ಸ್ಥಾನವನ್ನು ಮತ್ತು 17 ವರ್ಷ ವಯೋಮಿತಿಯ ಪಂದ್ಯಾಟದಲ್ಲಿ ಡಿ.ಪೌಲ್ ಶಾಲೆ, ಮೈಸೂರು ತಂಡ ಪ್ರಥಮ , ಜನರಲ್ ತಿಮ್ಮಯ್ಯ ಶಾಲೆ, ಮಡಿಕೇರಿ ದ್ವಿತೀಯ ಸ್ಥಾನವನ್ನು ಹಾಗೂ 19 ವರ್ಷ ವಯೋಮಿತಿಯ ವಿಭಾಗದಲ್ಲಿ ಡಿ.ಪೌಲ್ ಶಾಲೆ, ಮೈಸೂರು ತಂಡ ಪ್ರಥಮ , ಕ್ಯಾಲ್ಸ್ ಶಾಲೆ,ಗೋಣಿಕೊಪ್ಪ, ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.
ಎಲ್ಲಾ ತಂಡಗಳಿಗೆ ಮುಖ್ಯ ಅತಿಥಿಗಳಾಗಿದ್ದ ಕೊಡಗು ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷರಾದ ಐ.ಎಸ್.ಪೊನ್ನಪ್ಪ ಮತ್ತು ಉದ್ಗಮ್ ಸಂಸ್ಥೆಯ ಪ್ರಾಂಶುಪಾಲರಾದ ಬಿ.ಪಿ. ಬೋಪಣ್ಣ ಬಹುಮಾನ ವಿತರಿಸಿ ಮುಂಬರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಶುಭಾಶಯವನ್ನು ಕೋರಿದರು.
What's Your Reaction?
Like
2
Dislike
0
Love
1
Funny
0
Angry
0
Sad
0
Wow
0
