ಕೊಡಗಿನ ಬಾಲಕನಿಗೆ ರಾಷ್ಟ್ರೀಯ ಕಿರೀಟ - NCC ಫೈರಿಂಗ್‌ನಲ್ಲಿ ಚಾಂಪಿಯನ್ ಆದ ಮಡಿಕೇರಿಯ ಜೇಷ್ಠ ಸುಬ್ಬಯ್ಯ!
admincoorgdaily

ಮಡಿಕೇರಿ;ಮರಗೋಡು ಹೊಸಕೇರಿ ಗ್ರಾಮದ ಮಂಡೀರ (ಪಾಣತ್ತಲೆ) ವಿ. ಹರೀಶ್ ಹಾಗೂ ವಿಮಾ ದಂಪತಿಯ ಪುತ್ರ, ಮಡಿಕೇರಿಯ ಕೊಡಗು ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಗೋಲ್ಡನ್ ಸಾರ್ಜೆಂಟ್ ಜೇಷ್ಠ ಸುಬ್ಬಯ್ಯ ಎಂ.ಹೆಚ್. ರಾಷ್ಟ್ರೀಯ ಕೆಡೆಟ್ ಕೋರ್ (NCC) ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಥಲ್ ಸೈನಿಕ ಶಿಬಿರ (AITSC)ದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಜೇಷ್ಠ ಸುಬ್ಬಯ್ಯ, ಫೈರಿಂಗ್ (ಶೂಟಿಂಗ್) ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪಡೆದಿದ್ದಾರೆ.