ನರಿಯಂದಡ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ರೂ. 25 ಲಕ್ಷ ವೆಚ್ಚದ ಸೇತುವೆ ಲೋಕಾರ್ಪಣೆ: ಶಾಸಕ ಪೊನ್ನಣ್ಣ
admincoorgdaily

ಮಡಿಕೇರಿ:ತಾಲೂಕಿನ ನರಿಯಂದಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಲಾವರ ಭಾಗಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಶ್ರೀ ಎ.ಎಸ್. ಪೊನ್ನಣ್ಣ ಅವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿದರು.
ಮೊದಲಿಗೆ ಚೇಲಾವರ ಶಾಲೆಯ ಬಳಿ ಶಾಸಕರ ವಿಶೇಷ ಅನುದಾನದ ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರು. ಈ ಸೇತುವೆ ನಿರ್ಮಾಣದಿಂದ ಈ ಭಾಗದ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಪ್ರಯಾಣಿಸಲು, ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಪಟ್ಟಚೇರುವಂಡ ಕುಟುಂಬಸ್ಥರು, ಮೀನಾ, ದೇವಯ್ಯ, ಭೀಮ್ಮಯ್ಯ, ದೀಪಕ್, ದಿಲೀಪ್, ಸಂಜು ಗಣಪತಿ, ಪವನ್, ಗಿರಿ, ಮಂಜು, ಚಿಟ್ಟು ಸೀತಾರಾಮ್, ರಮೇಶ್, ಸುಬ್ಬಯ್ಯ, ಕುಂಡಚ್ಚಿರ ಮಂಜು ದೇವಯ್ಯ, ಅಜ್ಜಿಕುಟ್ಟಿರ ಪೊನ್ನು, ಆದಿತ್ಯ ಪೆಮ್ಮಯ್ಯ, ಮಸೂದ್, ಗುತ್ತಿಗೆದಾರರಾದ ಸಮದ್ ಮೆಟ್ರೋ, ರಜಾಕ್ ಬೆಟ್ಟಗೇರಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.