ಚೆಂಬು ಗ್ರಾಮದ ಮಾನಿನಿಯರ ನಿಯೋಗದಿಂದ ಪೊನ್ನಣ್ಣ ನವರಿಗೆ ಮನವಿ
admincoorgdaily

ಮಡಿಕೇರಿ; ತಾಲೂಕಿನ ಚೆಂಬು
ಗ್ರಾಮದ ಮಹಿಳೆಯರು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್.ಪೊನ್ನಣ್ಣ ನವರನ್ನು ಭೇಟಿ ಮಾಡಿ ಗ್ರಾಮದ ಶಾಲೆಯ ವ್ಯವಸ್ಥೆ ಬಗ್ಗೆ ಮನವಿಯನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪೊನ್ನಣ್ಣ ನವರು ತಕ್ಷಣವೇ ಸಂಭಂದ ಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪೊನ್ನಣ್ಣ ನವರು ತಮ್ಮ ಕೋರಿಕೆಗಾಗಿ ಯಾರ ಶಿಫಾರಸ್ಸು ಇಲ್ಲದೇ ನೇರವಾಗಿ ಕ್ಷೇತ್ರದ ಜನಪ್ರತಿನಿಧಿಯಾದ ತಮ್ಮನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರಜಾಪ್ರಭುತ್ವದ
ನೈಜ ಹಕ್ಕನ್ನು ಚಲಾಯಿಸಿದ ಮಹಿಳೆಯರ ಪ್ರಬುದ್ದತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.