ದೇವಾಲಯಕ್ಕೆ ಪೂಜೆಗೆಂದು ಬಂದ ಕುಟುಂಬದ ಮೇಲೆ ಗುಂಪೊಂದರಿಂದ ಹಲ್ಲೆ; ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ,ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲು
admincoorgdaily

ಮಡಿಕೇರಿ: ಹಬ್ಬದಲ್ಲಿ ಪೂಜೆಗೆಂದು ದೇವಾಲಯಕ್ಕೆ ಬಂದಿದ್ದ ಕುಟುಂಬದ ಮೇಲೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ನಗರದ ಗೌಳಿ ಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯಕ್ಕೆ ಭಾನುವಾರ ಸಂಜೆ ಹೊಸ ಬಡಾವಣೆಯ ನಿವಾಸಿಗಳಾದ ಜಿ. ಆರ್. ಸತೀಶ್ ಹಾಗೂ ಪತ್ನಿ ಮತ್ತು ಮಕ್ಕಳಾದ ಸಂಪ್ರೀತ್ ಹಾಗೂ ಅಭಿಶೀತ್ ಅವರುಗಳು ಪೂಜೆಗೆಂದು ಬಂದಿದ್ದ ಸಂದರ್ಭದಲ್ಲಿ ದೇವಾಲಯದ ಮುಂಭಾಗದಲ್ಲಿ ಗುಂಪು ಕಟ್ಟಿಕೊಂಡು ನಿಂತಿದ್ದ ಸ್ಥಳೀಯ ನಿವಾಸಿಗಳಾದ ಶರತ್, ಸೂರಜ್ ಮತ್ತು ಉಮೇಶ್ ಸುಬ್ರಮಣಿ ಅವರುಗಳ ಗುಂಪು ಹಳೆಯ ವೈಷಮ್ಯದ ಹಿನ್ನೆಲೆ ಸತೀಶ್ ಹಾಗೂ ಮಕ್ಕಳಾದ ಸಂಪ್ರೀತ್ ಮತ್ತು ಅಭಿಶೀತ್ ಅವರುಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿಂದಿನಿಂದಲೂ ನಮಗೆ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದು ಈ ಕುರಿತು ದೂರನ್ನು ಕೂಡ ನೀಡಲಾಗಿತ್ತು.
ಇದೀಗ ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದಾರೆ ಆದರೂ ಇದುವರೆಗೂ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಸತೀಶ್, ಸಂಪ್ರೀತ್ ಹಾಗೂ ಅಭಿಶೀತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಲ್ಲದೇ ತಮ್ಮ ಕುಟುಂಬದ ಮೇಲೆ ಸದರಿ ಆರೋಪಗಳಿಂದ ಕೊಲೆ ಬೆದರಿಕೆ ಇದ್ದು ಪೋಲಿಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.