Kodagu

ಕತ್ತಲೆಕಾಡಿನಲ್ಲಿ ಸಂಭ್ರಮದ ಗಣೇಶೋತ್ಸವ - ಕ್ರೀಡಾಕೂಟ, ಸಾಧಕರಿಗೆ ಸನ್ಮಾನ

admincoorgdaily

ಕತ್ತಲೆಕಾಡಿನಲ್ಲಿ ಸಂಭ್ರಮದ ಗಣೇಶೋತ್ಸವ - ಕ್ರೀಡಾಕೂಟ, ಸಾಧಕರಿಗೆ ಸನ್ಮಾನ
ಮಡಿಕೇರಿ : ಕತ್ತಲೆಕಾಡು-ಜೇನುಕೊಲ್ಲಿಯ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ ಸಂಭ್ರಮದಿಂದ ಜರುಗಿತು.
14ರಂದು ಟ್ರಸ್ಟ್‌ ಆವರಣದಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಬಳಿಕ ಭಾರತ್‌ ಮಾತಾ ಪೂಜೆ ನೆರವೇರಿತು. ಬಳಿಕ ಕ್ಲೋಸ್‌ಬರ್ನ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪರಪ್ಪು ಕೃಷ್ಣಪ್ಪ, ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಸುಶೀಲ, ನಿವೃತ್ತ ಶಿಕ್ಷಕಿ ಎಂ.ಟಿ. ಲಕ್ಷ್ಮೀ, ಫುಟ್‌ಬಾಲ್‌ ತರಬೇತುಗಾರ್ತಿ ಸುಶ್ಮಿತಾ ರೈ ಅವರನ್ನು ಸನ್ಮಾನಿಸಲಾಯಿತು. ನಂತರ ಗ್ರಾಮಸ್ಥರಿಗೆ ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳು ಜರುಗಿದವು. 

ಸಂಜೆ ಗೂನಡ್ಕದ ಶ್ರೀ ಕೃಷ್ಣ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ವಿನಾಯಕ ಸೇವಾ ಟ್ರಸ್ಟ್‌ ಭಜನಾ ತಂಡದವರಿಗೆ ಭಜನೆ ಹಾಡುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
15ರಂದು ಸಂಜೆ ಆಶ್ಲೇಷ ಪೂಜೆ, 16ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 17ರಂದು ಸ್ಥಳೀಯ ಪ್ರತಿಭೆಗಳಿಂದ ಸಂಗೀತ ರಸಮಂಜರಿ ಕಾರ್ಯುಕ್ರಮ ಜರುಗಿತು. 18ರಂದು ಮಧ್ಯಾಹ್ನ ಮಹಾಪೂಜೆ ಬಳಿಕ ಗ್ರಾಮದಲ್ಲಿ ಗೌರಿ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿ ಬಳಿಕ ಕ್ಲೊಸ್‌ಬರ್ನ್‌ ಕೆರೆಯಲ್ಲಿ ವಿಸರ್ಜಿಸಲಾಯಿತು. ಕೊಡಗಿನ ಸಾಂಪ್ರದಾಯಿಕ ವಾದ್ಯಗೋಷ್ಠಿ, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಕುಣಿತ ಭಜನೆ ತಂಡದ ಪ್ರದರ್ಶನ, ಬೊಂಬೆ ಕಲಾವಿದರ ಪ್ರದರ್ಶನ ಮೆರವಣಿಗೆಗೆ ಸಾಂಪ್ರದಾಯಿಕ ರಂಗು ನೀಡಿತು. ವೇದಮೂರ್ತಿ ಗಿರೀಶ್‌ ತಂತ್ರಿ ಪೂಜಾ ಕಾರ್ಯಗಳನ್ನು ನಡೆಸಿದರು.

ವಿಜೇತರ ವಿವರ : ಬಲೂನ್‌ ಜಂಪ್‌ ಸ್ಪರ್ಧೆ ಪೂರ್ವಿತಾ(ಪ್ರ), ಆರಾಧ್ಯ(ದ್ವಿ), ಆದ್ಯ(ತೃ), ಬಾಟಲಿಗೆ ಪೆನ್‌ ಹಾಕುವ ಸ್ಪರ್ಧೆ ವಂಶಿಕ(ಪ್ರ), ಶ್ರಾವ್ಯಾ(ದ್ವಿ), ದಿಲನ್(ತೃ), ಛದ್ಮವೇಷ ಅಸ್ವಿ ರೈ(ಪ್ರ), ಮನಸ್ಸು ಕಿಶೋರ್‌ ರೈ (ದ್ವಿ), ಕೃತಿಕಾ(ತೃ), ಕಾಳು ಹೆಕ್ಕುವ ಸ್ಪರ್ಧೆ ಸಾನ್ವಿ(ಪ್ರ), ಭವಿಷ್(ದ್ವಿ), ಕೃತಿಕಾ(ತೃ), ಮಹಿಳೆಯರ ವಿಭಾಗದ ಬಾಂಬಿಂಗ್‌ ದ ಸಿಟಿ ಪ್ರೇಮ ರೈ(ಪ್ರ), ಮಮತಾ(ದ್ವಿ), ಬಲೂನ್‌ ಒಡೆಯುವ ಸ್ಪರ್ಧೆ ಪೂರ್ಣಿಮಾ(ಪ್ರ), ಜಯಶ್ರೀ(ದ್ವಿ), ಮಮತಾ(ತೃ), ಸಂಗೀತ ಕುರ್ಚಿ ವನಿತಾ(ಪ್ರ), ಶಾಲಿನಿ ವಿಕ್ರಂ(ದ್ವಿ), ಪೂಜಾ(ತೃ), ಬಾಲ್‌ ಪಾಸಿಂಗ್‌ ಚಂದನ್(ಪ್ರ), ಯಶಿಕಾ ಗೌಡ(ದ್ವಿ), ಆರಾಧ್ಯ(ತೃ), ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಕಿಶೋರ್‌ ರೈ ಕತ್ತಲೆಕಾಡು(ಪ್ರ), ಭಜನಾ ಸ್ಪರ್ಧೆ ಕಿರಣ್‌ ತಂಡ(ಪ್ರ), ಶ್ರಾವ್ಯಾ ತಂಡ(ದ್ವಿ), ವಂಶಿಕ ರೈ ತಂಡ(ತೃ), ಕಾಣಿಕೆ ಡಬ್ಬದಲ್ಲಿ ಹೆಚ್ಚು ಹಣ ಸಂಗ್ರಹ ಜನಾರ್ದನ ರೈ(ಪ್ರ), ಅಶೋಕ ವಿನ್ಯ(ದ್ವಿ), ಉದಯ ಜೇನುಕೊಲ್ಲಿ(ತೃ) ಬಹುಮಾನ ಪಡೆದರು.