Kodagu

ಹರಿಶ್ಚಂದ್ರಪುರದಲ್ಲಿ ಸಂಭ್ರಮದ ಪುತ್ತರಿ ಆಚರಣೆ

admincoorgdaily

ಹರಿಶ್ಚಂದ್ರಪುರದಲ್ಲಿ ಸಂಭ್ರಮದ ಪುತ್ತರಿ ಆಚರಣೆ
ಗೋಣಿಕೊಪ್ಪಲು: ಹರಿಶ್ಚಂದ್ರಪುರದ ಕೀಲೇರಿ ಮಠಪುರ ಮುತ್ತಪ್ಪ ದೇವಸ್ಥಾನದಲ್ಲಿ ಕೊಡಗಿನ ಸುಗ್ಗಿ ಹಬ್ಬವಾದ ಪುತ್ತರಿಯನ್ನು ಶ್ರದ್ಧಾಭಕ್ತಿ ಹಾಗೂ ಸಾಂಪ್ರದಾಯಿಕ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪುತ್ತರಿ ವೆಳ್ಳಾಟಂ ಹಾಗೂ ಪುತ್ತರಿ ಕದಿರು ತೆಗೆಯುವ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಪವಿತ್ರ ಭತ್ತದ ಕದಿರನ್ನು ನೆರೆದಿದ್ದ ಭಕ್ತಾದಿಗಳಿಗೆ ವಿತರಿಸಲಾಯಿತು.

ಪುತ್ತರಿ ಹಬ್ಬದ ವಿಶೇಷವಾಗಿ ಭಕ್ತಾದಿಗಳಿಗೆ ತಂಬಿಟ್ಟು ಮತ್ತು ಕಳಂಜಿ ವಿತರಿಸುವುದರೊಂದಿಗೆ, ಸರ್ವರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪುತ್ತರಿ ವೆಳ್ಳಾಟಂ ಹಾಗೂ ಕದಿರು ತೆಗೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಕೀಲೇರಿ ಮಠಪುರ ಮುತ್ತಪ್ಪ ಟ್ರಸ್ಟ್ನ ಕೆ.ಜೆ. ಜಯಂದ್ರನ್, ಕೆ.ವೈ. ಸಂಜೀತ್, ಕೆ.ವೈ. ರಾಜೀತ್, ಮೋಹನ್ ರಾಜ್, ದೇವಸ್ಥಾನದ ಅರ್ಚಕರಾದ ಚಂದ್ರಶೇಖರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.