ಕಳ್ಳಿರ ಬಾಣೆ ಮಂದ್ನಲ್ಲಿ ಸಂಭ್ರಮದ ಪುತ್ತರಿ ಕೋಲ್: ಕೊಡವ ಸಂಸ್ಕೃತಿ, ಸಾಂಪ್ರದಾಯಿಕ ಕಲೆಗಳ ಅನಾವರಣ
admincoorgdaily

ವಿರಾಜಪೇಟೆ: ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರು ಕೇರಳಿಗರು ಹಾಗೂ ಕೊಡಗಿನಲ್ಲಿರುವ ಮಲಯಾಳಿ ಸಮುದಾಯದ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವವಾದಿ) ಸಿಪಿಐ(ಎಂ) ಕೊಡಗು ಘಟಕದ ವತಿಯಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ವಿರಾಜಪೇಟೆಯ ಕಚೇರಿಯಲ್ಲಿ ಖಂಡನಾ ಸಭೆ ನಡೆಸಿ, ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಖಂಡನಾ ಸಭೆಯಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಪಿ.ಆರ್ ಭರತ್ ಮಾತನಾಡಿ, "ಕ್ರೀಡಾಕೂಟಕ್ಕೆ ಯಾವುದೇ ರಾಜಕೀಯ ಅಥವಾ ಸಂಕುಚಿತ ಸಂಬmಧಗಳಿಲ್ಲ. ಕ್ರೀಡಾಕೂಟ ಯಾವತ್ತೂ ಸೌಹಾರ್ದತೆ, ಸಹೋದರತೆ ಮತ್ತು ಐಕ್ಯತೆಯನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಜಗತ್ತೇ ಅಭಿಮಾನದಿಂದ ಕಾಣುವ ಕೊಡಗಿನ ಪ್ರತಿಷ್ಠಿತ ಹಾಕಿ ಕ್ರೀಡಾಕೂಟದ ಉದ್ಘಾಟನಾ ವೇದಿಕೆಯಲ್ಲಿ ಕ್ರೀಡೆಗೆ ಸಂಬmಧಿಸಿದ ವಿಷಯಗಳನ್ನು ಮಾತನಾಡುವುದನ್ನು ಬಿಟ್ಟು, ಮಲಯಾಳಿಗಳು ಕೊಡಗಿನ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂಬ ಉಡಾಫೆಯ ಮಾತುಗಳನ್ನಾಡಿ ಕೊಡಗು ಮತ್ತು ಕೇರಳಿಗರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಲು ಪ್ರತಾಪ್ ಸಿಂಹ ಕೈಹಾಕಿದ್ದಾರೆ. ಈ ರೀತಿಯ ಭಾಷೆ ಪ್ರಯೋಗಿಸಿ ಆ ಕ್ರೀಡಾಕೂಟಕ್ಕೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪ್ರತಾಪ್ ಸಿಂಹ ಅವರು ಕೇವಲ ಮಲಯಾಳಿಗಳನ್ನು ಮಾತ್ರವಲ್ಲ, ಈ ಹಿಂದೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿದ್ದ ಅವಧಿಯಲ್ಲಿ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಕೋಮು ದಳ್ಳುರಿ ಹತ್ತಿಸಲು ಪ್ರಯತ್ನಿಸಿದರು.
ಸೌಹಾರ್ದತೆಯಿಂದ ಇದ್ದ ಹುಣಸೂರು, ಪಿರಿಯಾಪಟ್ಟಣ ಪ್ರದೇಶಗಳಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡಿದ್ದನ್ನು ನಾವೆಲ್ಲರೂ ಮರೆಯಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದಲ್ಲೂ ಗೌರಿ ಗಣೇಶೋತ್ಸವದ ಸಂದರ್ಭದಲ್ಲಿ ಮತೀಯ ಸಂಘರ್ಷ ಸೃಷ್ಟಿಸಿರುವುದನ್ನು ನಾವು ಕಂಡಿದ್ದೇವೆ. ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಸೌಹಾರ್ದತೆ ಕೆಡಿಸುವುದೇ ಅವರ ಬಳಿಯಿರುವ ಏಕೈಕ ಆಯುಧವಾಗಿದೆ" ಎಂದು ದೂರಿದರು.
"ಮಲಯಾಳಿಗಳು ಕೊಡಗಿನ ಸಂಸ್ಕೃತಿ ನಾಶ ಮಾಡುತ್ತಿದ್ದಾರೆ ಎಂದು ಹೇಳುವುದರಿಂದ ಪ್ರತಾಪ್ ಸಿಂಹ ಅವರಿಗೆ ತಿಳುವಳಿಕೆಯ ಕೊರತೆ ಬಹಳಷ್ಟಿದೆ ಎಂಬುದು ತಿಳಿಯುತ್ತದೆ. ಕೊಡಗು ಇಂದು ಭಾರತದಲ್ಲೇ ಕಾಫಿ ಮತ್ತು ಕರಿಮೆಣಸಿನ ಪ್ಲಾಂಟೇಶನ್ ರಂಗದಲ್ಲಿ ದೊಡ್ಡ ಹೆಸರು ಗಳಿಸಲು ಸಾಧ್ಯವಾಗಿದ್ದರೆ, ಅದಕ್ಕೆ 70ರ ದಶಕದಲ್ಲಿ ಕೇರಳದಿಂದ ಬಂದ ಮಲಯಾಳಿ ಕಾರ್ಮಿಕರು ಹಾಗೂ ತಮಿಳುನಾಡಿನಿಂದ ಬಂದ ತಮಿಳು ಜನಾಂಗದವರ ಅಪಾರ ಕೊಡುಗೆಯಿದೆ. ಅವರ ರಕ್ತ, ಬೆವರು ಚೆಲ್ಲಿ ಕೊಡಗಿನ ಪ್ಲಾಂಟೇಶನ್ ರಂಗವನ್ನು ಕಟ್ಟಿದ್ದಾರೆ ಎಂಬುದನ್ನು ಪ್ರತಾಪ್ ಸಿಂಹ ಅರ್ಥಮಾಡಿಕೊಳ್ಳಬೇಕು. ಕೊಡಗಿನಲ್ಲಿರುವ ಮಲಯಾಳಿಗಳು ಹಾಗೂ ಹೊರರಾಜ್ಯದ ಜನರು ಕೊಡಗಿನ ಸಂಸ್ಕöÈತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವವರಾಗಿದ್ದು, ಇಲ್ಲಿನ ಎಲ್ಲಾ ಹಬ್ಬ-ಹರಿದಿನಗಳನ್ನು ಸಂಭ್ರಮದಿAದ ಆಚರಿಸುತ್ತಾರೆ. ಸುಮ್ಮನೆ ಬಾಯಿಗೆ ಬಂದ ರೀತಿಯಲ್ಲಿ ಯಾವುದೋ ಒಂದು ಸಮುದಾಯದ ತಲೆಗಳು ಜಾಸ್ತಿ ಕಂಡ ತಕ್ಷಣ ಆ ರೀತಿ ಹೇಳುವುದು ಸರಿಯಲ್ಲ"ಎಂದು ಎಚ್ಚರಿಸಿದರು.
"ಬಿಜೆಪಿ ಎಂಬುದು ಒಂದು ರಾಷ್ಟಿçÃಯ ಪಕ್ಷವೇ ಹೊರತು ಯಾವುದೋ ಒಂದು ಲೋಕಲ್ ಪಕ್ಷವಲ್ಲ. ಎಲ್ಲಾ ಜನಾಂಗದವರ ಮತಗಳನ್ನು ಪಡೆದುಕೊಂಡು ಅಧಿಕಾರದಲ್ಲಿರುವ ಬಿಜೆಪಿಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟಿçÃಯ ನಾಯಕರು ಪ್ರತಾಪ್ ಸಿಂಹ ಏನೇ ಹೇಳಿದರೂ ಉತ್ತರ ನೀಡದೆ ಮೌನವಾಗಿ ಕೂತಿರುವುದು ಸರಿಯಲ್ಲ. ಕೇರಳದಿಂದ ಜನರು ಈ ಜಿಲ್ಲೆಗೆ ಬರುವಂತೆಯೇ, ಕೊಡಗಿನ ಎಷ್ಟೋ ಜನರು ಇವತ್ತು ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಈಗಲಾದರೂ ಪಕ್ಷದಿಂದ ಹೊರಹಾಕುವ ಕೆಲಸ ಮಾಡಬೇಕು" ಎಂದು ಭರತ್ ಒತ್ತಾಯಿಸಿದರು.
ಕಾರ್ಯದರ್ಶಿ ಎಚ್.ಬಿ. ರಮೇಶ್ ಮಾತನಾಡಿ, "ನಾವು ಸಂವಿಧಾನದ ಅಡಿಯಲ್ಲಿ ಜೀವನ ಮಾಡುತ್ತಿದ್ದೇವೆ. ಸಂವಿಧಾನವು ಪ್ರತಿಯೊಬ್ಬರಿಗೂ ಎಲ್ಲಾ ರೀತಿಯ ಹಕ್ಕುಗಳನ್ನು ನೀಡುತ್ತದೆ. ಯಾರು ಯಾವ ಜಿಲ್ಲೆಯಲ್ಲಿ ಇರಬೇಕಾದರೂ, ಎಲ್ಲಿ ಬದುಕಬೇಕಾದರೂ, ಯಾವ ರಾಜ್ಯಕ್ಕೆ ಹೋಗಿ ಬದುಕಬೇಕಾದರೂ ಅದು ಸಂವಿಧಾನ ನಮಗೆ ನೀಡಿರುವ ಹಕ್ಕುಗಳಲ್ಲಿ ಒಂದಾಗಿದೆ. ಕೇರಳದಲ್ಲಿ ಬರಿ ತಮಿಳುನಾಡು ಅಥವಾ ಇನ್ನೇನೋ ಮಾತ್ರ ಇರುವುದು ಎಂಬAತೆ ಮಾತನಾಡಿರುವುದನ್ನು ಮೊದಲು ನಾವು ಪ್ರಶ್ನಿಸಬೇಕಾಗುತ್ತದೆ" ಎಂದರು.
"ಪ್ರತಾಪ್ ಸಿಂಹ ಅವರು ಸಂಸದರಾಗಿ ಎರಡು ಬಾರಿ ಆಯ್ಕೆಯಾಗುವ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಮಲಯಾಳಿಗಳು ಅವರಿಗೆ ಮತ ಹಾಕಿದ್ದಾರೆ ಎಂಬುದನ್ನು ನಾವು ನೆನಪಿಸುತ್ತೇವೆ. ಇಲ್ಲಿ ಜಿಲ್ಲೆಯಲ್ಲಿ ನಾವೆಲ್ಲರೂ ಅನ್ಯೋನ್ಯವಾಗಿದ್ದೇವೆ ಮತ್ತು ನಮಗೂ ಕೇರಳಕ್ಕೂ ಅವಿನಾಭಾವ ಸಂಬಂಧವಿದೆ. ದೇವಸ್ಥಾನಗಳ ವಿಚಾರಕ್ಕೆ ಬಂದರೆ ಕೊಡಗಿನವರು ಅಲ್ಲಿಗೆ ಹೋಗಿ ಪೂಜೆ ಮಾಡಿಸುವುದು, ಅಕ್ಕಿ ತೆಗೆದುಕೊಂಡು ಹೋಗಿ ಕೊಡುವ ಸಂಪ್ರದಾಯ ಈಗಲೂ ನಡೆಯುತ್ತಿದೆ. ಹೀಗಿರುವಾಗ ಕೇರಳದವರು ಬಂದು ಕೊಡಗಿನ ಸಂಸ್ಕೃತಿ ಹಾಳಾಗಿದೆ ಎಂದು ಹೇಳುವುದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ಜಿಲ್ಲಾ ಸಮಿತಿಯ ಪರವಾಗಿ ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಪ್ರತಾಪ್ ಸಿಂಹ ಅವರು ತಮ್ಮ ಈ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇವೆ" ಎಂದರು.
ಸಿಪಿಐ(ಎಂ) ಮುಖಂಡ ಡಾ. ಐ.ಆರ್. ದುರ್ಗಾ ಪ್ರಸಾದ್, ಪ್ರತಾಪ್ ಸಿಂಹ ಅವರ ಮಾತುಗಳು ಅವರ ಅಪ್ರಬುದ್ಧ ಚಿಂತನೆಯನ್ನು ತೋರಿಸುತ್ತವೆ. ಸಂಘಪರಿವಾರದ 'ಹಿಂದೂ ಎಂದೂ ಒಂದು' ಎಂಬ ಘೋಷಣೆ ಕೇವಲ ಮೇಲ್ಜಾತಿಯ ಶ್ರೀಮಂತರ ಸ್ವಾರ್ಥ ಸಾಧನೆಗೆ ಇತರರನ್ನು ಬಳಸಿಕೊಳ್ಳುವ ತಂತ್ರವಷ್ಟೇ" ಎಂದು ಕಿಡಿಕಾರಿದರು.
"ಭಾಷಾವಾರು ಪ್ರಾಂತ್ಯಗಳ ಸಹಬಾಳ್ವೆಯೇ ಭಾರತದ ಐಕ್ಯತೆಯ ಶಕ್ತಿಯಾಗಿದ್ದು, ಸಂವಿಧಾನವು ಪ್ರತಿಯೊಬ್ಬರಿಗೂ ದೇಶದ ಎಲ್ಲಿಯೂ ಹೋಗಿ ಬದುಕುವ ಹಕ್ಕು ನೀಡಿದೆ. ಉದ್ಯೋಗಕ್ಕಾಗಿ ವಲಸೆ ಹೋಗುವುದು ಸಹಜ ಪ್ರಕ್ರಿಯೆಯಾಗಿದ್ದು, ಮಲಯಾಳಿಗಳು ಹೊರರಾಜ್ಯಗಳಿಗೆ ಬಂದಂತೆ ಕನ್ನಡಿಗರೂ ಎಲ್ಲಾ ರಾಜ್ಯಗಳಿಗೆ ಹೋಗಿದ್ದಾರೆ. ಹಾಲೇರಿ ಅರಸರ ಕಾಲಕ್ಕೂ ಮುನ್ನ ಕೊಡಗು ಮತ್ತು ಕೇರಳ ಒಂದೇ ಬೆಟ್ಟ ಸಾಲಿನ ಭಾಗವಾಗಿದ್ದು, ಕೊಡಗಿನ ಮೂಲ ದೇವತೆಗಳು, ಹುತ್ತರಿ-ಓಣಂ ಹಬ್ಬಗಳ ಸಾಂಸ್ಕೃತಿಕ ಬೆಸುಗೆ ಹಾಗೂ ಅಕ್ಕಿ ವ್ಯಾಪಾರದ ಇತಿಹಾಸವು ಎರಡೂ ಪ್ರದೇಶಗಳ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಪ್ರತಾಪ್ ಸಿಂಹ ಅವರ ಈ ದ್ವೇಷಪೂರಿತ ಹೇಳಿಕೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಖಂಡಿಸದೆ ಮೌನವಾಗಿರುವುದು, ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಸಾಬೀತುಪಡಿಸಿದೆ. ಆದ್ದರಿಂದ ಜಿಲ್ಲೆಯ ಮಲಯಾಳಿಗಳು ಹಾಗೂ ದೇಶಪ್ರೇಮಿಗಳು ಬಿಜೆಪಿ-ಕಾಂಗ್ರೆಸ್ ತಿರಸ್ಕರಿಸಿ ಜನಪರ ವೇದಿಕೆಯೊಂದಿಗೆ ಕೈಜೋಡಿಸಬೇಕು" ಎಂದು ವಿನಂತಿಸಿದರು.
ಖಂಡನಾ ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಪದ್ಮಿನಿ ಶ್ರೀಧರ್ ಹಾಗೂ ಎ.ಸಿ. ಸಾಬು ಅವರು ಉಪಸ್ಥಿತರಿದ್ದರು.