Kodagu

ತಲಕಾವೇರಿಯಿಂದ ಭಗಂಡೇಶ್ವರ ಸನ್ನಿಧಿಗೆ ಕಾವೇರಿ ಮಾತೆಯ ಆಭರಣಗಳ ಭವ್ಯ ಮೆರವಣಿಗೆ; ಸರ್ಕಾರಿ ಖಜಾನೆಗೆ ಭಂಡಾರ ಹಸ್ತಾಂತರ

admincoorgdaily

ತಲಕಾವೇರಿಯಿಂದ ಭಗಂಡೇಶ್ವರ ಸನ್ನಿಧಿಗೆ ಕಾವೇರಿ ಮಾತೆಯ ಆಭರಣಗಳ ಭವ್ಯ ಮೆರವಣಿಗೆ; ಸರ್ಕಾರಿ ಖಜಾನೆಗೆ ಭಂಡಾರ ಹಸ್ತಾಂತರ
ಭಾಗಮಂಡಲ;
ಅಕ್ಟೋಬರ್ 16ರಂದು ನಡೆದ ಪವಿತ್ರ ಕಾವೇರಿ ತೀರ್ಥೋದ್ಭವದ ಪ್ರಯುಕ್ತ ತಲಕಾವೇರಿ ಕ್ಷೇತ್ರಕ್ಕೆ ಕೊಂಡೊಯ್ಯಲಾಗಿದ್ದ ಕಾವೇರಿ ಮಾತೆಯ ಆಭರಣಗಳನ್ನು, ಒಂದು ತಿಂಗಳ ಪೂಜಾ ಕೈಂಕರ್ಯಗಳ ಬಳಿಕ ಇಂದು ಮರಳಿ ಭಗಂಡೇಶ್ವರ ಸನ್ನಿಧಿಗೆ ತಂದು ಸರ್ಕಾರದ ಖಜಾನೆಗೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ತಕ್ಕರಾದ ಕೋಡಿ ಶ್ರೀ ಮೋಟಯ್ಯ ಮತ್ತು ಕುಟುಂಬಸ್ಥರು ಹಾಗೂ ನಾಡಿನ ಜನಾಂಗ ಬಾಂಧವರ ನೇತೃತ್ವದಲ್ಲಿ ತೀರ್ಥೋದ್ಭವದಂದು ಈ ಆಭರಣಗಳನ್ನು ಭಗಂಡೇಶ್ವರ ದೇವಸ್ಥಾನದಿಂದ ತಲಕಾವೇರಿಗೆ ತೆಗೆದುಕೊಂಡು ಹೋಗಲಾಗಿತ್ತು.  ಮೇಲಿನ ನಿಲ್ದಾಣದಿಂದ ಭವ್ಯ ಮೆರವಣಿಗೆಯ ಮೂಲಕ ಆಭರಣಗಳನ್ನು ದೇವಸ್ಥಾನಕ್ಕೆ ತಂದು ಭಂಡಾರಕ್ಕೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ತಕ್ಕರೊಂದಿಗೆ ಸ್ಥಳೀಯ ಗಣ್ಯರು, ಕಾರುಗುಂದ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲ ಗಣಪತಿ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಡ್ಲೇರ ತುಳಸಿ ಹಾಗೂ ಅವರ ತಂಡ, ಭಾಗಮಂಡಲ ಮಹಿಳಾ ಒಕ್ಕೂಟ ಮತ್ತು ಒಕ್ಕೂಟದ ನಿರ್ದೇಶಕರಾದ ಕುಯ್ಯಮುಡಿ ರಂಜು ಅವರ ಮುತುವರ್ಜಿಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.